ವಿಮಾನ ನಿಲ್ದಾಣದಲ್ಲಿ ಸ್ಫೋಟ: 25 ಮಂದಿ ಸಾವು,110 ಜನರಿಗೆ ಗಾಯ
Update: 2020-12-31 11:38 IST
ಏಡನ್: ನೂತನವಾಗಿ ರಚನೆಯಾದ ಸಂಪುಟ ಸಚಿವರುಗಳಿದ್ದ ವಿಮಾನವು ನಿಲ್ದಾಣದಲ್ಲಿ ಇಳಿದ ಸ್ವಲ್ಪ ಸಮಯದ ಬಳಿಕ ಯೆಮನ್ ನಗರದ ಏಡನ್ ವಿಮಾನ ನಿಲ್ದಾಣದಲ್ಲಿ ದೊಡ್ಡ ಸ್ಫೋಟವೊಂದು ಸಂಭವಿಸಿದೆ. ಸಚಿವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, 110 ಮಂದಿ ಗಾಯಗೊಂಡಿದ್ದಾರೆ.
ಇರಾನ್ ಬೆಂಬಲಿತ ಹೌದಿ ಬಂಡುಕೋರರು ವಿಮಾನ ನಿಲ್ದಾಣದಲ್ಲಿ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದರು ಎಂದು ಯೆಮನ್ ಸರಕಾರ ತಿಳಿಸಿದೆ.
ಸರಕಾರದ ವಿಮಾನದಲ್ಲಿದ್ದ ಯಾರಿಗೂ ಗಾಯವಾಗಿಲ್ಲ. ವಿಮಾನ ನಿಲ್ದಾಣದ ದಾಳಿಯ ಬಳಿಕ ಕ್ಯಾಬಿನೆಟ್ ಸಚಿವರನ್ನು ವರ್ಗಾಯಿಸಲಾಗಿತ್ತು. ಆ ನಂತರ ನಗರದ ಅರಮನೆಯ ಹತ್ತಿರ ಮತ್ತೊಂದು ಸ್ಫೋಟವಾಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.