ಜಾನುವಾರು ಮಿಷನ್ ಯೋಜನೆಯ ವಿಮಾ ಕಂತು ವಿತರಣೆ
Update: 2021-01-10 19:03 IST
ಉಡುಪಿ, ಜ.10: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಾದ ಉಡುಪಿ, ಕಾಪು, ಕುಂದಾಪುರ, ಬೈಂದೂರು ಮತ್ತು ಕಾರ್ಕಳ ವ್ಯಾಪ್ತಿ ಗಳಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ 500 ಜಾನುವಾರುಗಳ ವಿಮೆಗಾಗಿ ಸಾಮಾನ್ಯ ವರ್ಗದ ಎಪಿಎಲ್/ಬಿಪಿಎಲ್ ವರ್ಗದ ಫಲಾನುಭವಿಗಳಿಗೆ ವಿಮಾ ಕಂತಿನ ಮೊತ್ತವನ್ನು ಸಹಾಯಧನದಲ್ಲಿ ವಿತರಿಸಲಾಗುವುದು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣ ಹಿತ್ತಲ ಮೇಕೆ ಘಟಕದಡಿ 1 ಘಟಕ ಹಾಗೂ ಗ್ರಾಮೀಣ ಹಂದಿ ಘಟಕದಡಿ 2 ಘಟಕ ಸಹಾಯಧನದೊಂದಿಗೆ ನಿಗದಿಯಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಸಮೀಪದ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ), ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಬೈಂದೂರು, ಕಾರ್ಕಳ ಮತ್ತು ಹೆಬ್ರಿರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸ ಬಹುದಾಗಿದೆ ಎಂದು ಉಡುಪಿ ಪಶು ಪಾಲನಾ ಇಲಾಖೆಯ ಉಪ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.