ಕನಿಷ್ಠ 10,000 ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ

Update: 2021-01-12 08:51 GMT

ಹೊಸದಿಲ್ಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಕನಿಷ್ಠ 10,000 ಸೈನಿಕರನ್ನು ಪೂರ್ವ ಲಡಾಖ್ ನಲ್ಲಿ ವಿವಾದಿತ ಗಡಿಯುದ್ದಕ್ಕೂ ಆಳಪ್ರದೇಶದಿಂದ ಹಿಂದಕ್ಕೆ ಕರೆಸಿಕೊಂಡಿದೆ ಎಂದು ಭಾರತ ಹಾಗೂ ಚೀನಾದ ನಡುವೆ  ಗಡಿ ಪ್ರದೇಶದಲ್ಲಿ ಈಗ ನಡೆಯುತ್ತಿರುವ ಉದ್ವಿಗ್ನ ಬೆಳವಣಿಗೆ ಕುರಿತು ಅರಿವಿರುವ ಅಧಿಕಾರಿಗಳು ಹಿಂದೂಸ್ತಾನ ಟೈಮ್ಸ್ ಗೆ ಸೋಮವಾರ ತಿಳಿಸಿದ್ದಾರೆ.

ಚೀನಾ ಸೈನಿಕರು ಹಿಂದೆ ಸರಿದರೂ ಮುಂಚೂಣಿಯಲ್ಲಿ ಚೀನಾದ ನಿಯೋಜನೆ ಒಂದೇ ಆಗಿರುತ್ತದೆ ಎಂದು ಎಎನ್ ಐ ಹಾಗೂ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪ್ರದೇಶದಲ್ಲಿನ ವಾತಾವರಣದ ಹಿನ್ನೆಲೆಯಲ್ಲಿ ಚೀನಾವು ತನ್ನ ಸೈನ್ಯವನ್ನು ಹಿಂದಕ್ಕೆ ಪಡೆದಿರಬಹುದು ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ಚಳಿಗಾಲದಲ್ಲಿ ದೊಡ್ಡ ಪ್ರಮಾಣದ ಅಥವಾ ಸೀಮಿತ ಮಿಲಿಟರಿ ಕಾರ್ಯಾಚರಣೆ ಇರುವುದಿಲ್ಲ. ಆಳ ಪ್ರದೇಶಗಳಿಂದ ಪೀಪಲ್ಸ್ ಲಿಬರೇಶನ್ ಆರ್ಮಿ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲು ಇದು ಕಾರಣವಾಗಿರಬಹುದು ಎಂದು ಮಾಜಿ ಉತ್ತರ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್(ನಿವೃತ್ತ)ಡಿಎಸ್ ಹೂಡಾ ದಿನಪತ್ರಿಕೆಯೊಂದಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News