ರೈತನಂತೆ ಪೋಸ್ ಕೊಟ್ಟು ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದ ವ್ಯಕ್ತಿ: ವೈರಲ್ ಫೋಟೊ ಹಿಂದಿನ ಸತ್ಯಾಂಶವೇನು?

Update: 2021-01-12 13:20 GMT

ಹೊಸದಿಲ್ಲಿ,ಜ.12: ಮಸೀದಿಯೊಂದರಲ್ಲಿ ಸಿಖ್ ವ್ಯಕ್ತಿಯೊಬ್ಬ ನಮಾಜ್ ಸಲ್ಲಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಜನವರಿ 12ರಂದು ಬೆಳಗ್ಗೆ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಹರೀಂದರ್ ಎಸ್ ಸಿಕ್ಕಾ ಈ ಕುರಿತು ಟ್ವೀಟ್ ಮಾಡಿ  “ಆತ ಕಿಸಾನ್ ರ್ಯಾಲಿಯಲ್ಲಿ ಭಾಗವಹಿಸಲು ಹೋಗಿದ್ದ.  ಮಸೀದಿಗೆ ಮರಳುವಾಗ ತನ್ನ ರುಮಾಲು ತೆಗೆಯಲು ಮರೆತಿದ್ದ. ಈ ಚಿತ್ರ ಶೇರ್ ಮಾಡಿ, ಕೃಷಿ ಮಸೂದೆ ಹೆಸರಿನಲ್ಲಿ ಜಿಹಾದಿ, ಕಮ್ಯುನಿಸ್ಟರು ಹಾಗೂ ದೇಶದ್ರೋಹಿಗಳು ಕೊಳೆ ಬಟ್ಟೆಗಳನ್ನು ಸಾರ್ವಜನಿಕವಾಗಿ ಒಗೆಯುತ್ತಿದ್ದಾರೆಯೇ?,'' ಎಂದು ಬರೆದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿದ್ದಾರೆ. ರೈತ ಪ್ರತಿಭಟನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಸಿಖ್ ರೈತನಂತೆ ತೋರ್ಪಡಿಸಿಕೊಂಡು ಭಾಗವಹಿಸಿದ್ದ ಎಂಬುವುದು ಅವರ ಟ್ವೀಟ್‍ನ ಅರ್ಥವಾಗಿತ್ತು.

ಸುಮಾರು 30,000 ಫಾಲೋವರ್ಸ್ ಇರುವ ಫೇಸ್ ಬುಕ್ ಪುಟ ಡಿಫೆನ್ಸ್360 ಕೂಡ ಇದೇ ಚಿತ್ರ ಶೇರ್ ಮಾಡಿದೆ.

Altnews.in ಈ ಚಿತ್ರದ ಕುರಿತಂತೆ ಕೀವರ್ಡ್ ಸರ್ಚ್ ಮಾಡಿದಾಗ ಈ ವೈರಲ್ ಚಿತ್ರ 2016ರಲ್ಲೂ ಅಂತರ್ಜಾಲದಲ್ಲಿತ್ತು ಎಂದು ತಿಳಿದು ಬಂತು.

ದೋಹಾ ಮೂಲದ ಫೇಸ್ ಬುಕ್ ಬಳಕೆದಾರರೊಬ್ಬರು ಈ ಚಿತ್ರವನ್ನು ಜನವರಿ 2016ರಲ್ಲಿ ಪೋಸ್ಟ್ ಮಾಡಿ "ಸಿಖ್ ಸೋದರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು. ಇದು ನನ್ನ ಹೆಮ್ಮೆಯ ಭಾರತ #ಪ್ರೌಡ್ ಇಂಡಿಯನ್," ಎಂದು ಬರೆದಿದ್ದರು. ಈ ಚಿತ್ರದಲ್ಲಿ ಕಾಣಿಸಿರುವ ವ್ಯಕ್ತಿ ಯಾರೆಂದು ತಿಳಿಯದೇ ಇದ್ದರೂ ಆತನಿಗೂ ರೈತ ಪ್ರತಿಭಟನೆಗೂ ಸಂಬಂಧವಿಲ್ಲ ಎಂಬುವುದಂತೂ ಸ್ಪಷ್ಟ ಎಂದು altnews.in ವರದಿಯಲ್ಲಿ ತಿಳಿಸಿದೆ.

Sikh brother praying namaz in masjid. This is my India #proudIndain

Posted by ‎زيد أولدي‎ on Friday, 22 January 2016

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News