ಕೆಲವು ಮುಸ್ಲಿಮರಿಗೆ ಭಾರತದ ವಿಜ್ಞಾನಿಗಳ ಬಗ್ಗೆ ನಂಬಿಕೆ ಇಲ್ಲ: ಬಿಜೆಪಿ ಶಾಸಕ ಸಂಗೀತ್ ಸೋಮ್ ವಿವಾದಾತ್ಮಕ ಹೇಳಿಕೆ

Update: 2021-01-13 17:05 GMT

ಹೊಸದಿಲ್ಲಿ, ಜ. 12: ಕೆಲವು ಮುಸ್ಲಿಮರಿಗೆ ದೇಶದ ವಿಜ್ಞಾನಿಗಳ ಬಗ್ಗೆ ನಂಬಿಕೆ ಇಲ್ಲ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಮಂಗಳವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೆಲವು ಮುಸ್ಲಿಮರಿಗೆ ದೇಶದ ವಿಜ್ಞಾನಿಗಳು ಹಾಗೂ ಪೊಲೀಸರ ಬಗ್ಗೆ ನಂಬಿಕೆ ಇರದೇ ಇರುವುದು ದುರದೃಷ್ಟಕರ. ಅವರಿಗೆ ಪ್ರಧಾನಿ ಅವರ ಮೇಲೂ ನಂಬಿಕೆ ಇಲ್ಲ. ಅವರಿಗೆ ಪಾಕಿಸ್ತಾನದ ಮೇಲೆ ನಂಬಿಕೆ ಇದೆ. ಆದುದರಿಂದ ಅವರು ಅಲ್ಲಿಗೆ ಹೋಗಲಿ ಎಂದು ಅವರು ಹೇಳಿದ್ದಾರೆ.

ತಾಜ್‌ಮಹಲ್ ಭಾರತೀಯ ಸಂಸ್ಕೃತಿ ಹಾಗೂ ಚರಿತ್ರೆಯ ಮೇಲಿನ ಕಪ್ಪು ಚುಕ್ಕೆ ಎಂದು ಕರೆಯುವ ಮೂಲಕ ಬಿಜೆಪಿ ನಾಯಕ ಸಂಗೀತ್ ಸಿಂಗ್ ಸೋಮ್ ಸೋಮವಾರ ಹಲವರ ಹುಬ್ಬೇರಿಸುವಂತೆ ಮಾಡಿದ್ದರು.

ಉತ್ತರಪ್ರದೇಶ ಸರಕಾರ ರಾಜ್ಯ ಪ್ರವಾಸೋದ್ಯಮ ಕೈಪಿಡಿಯಲ್ಲಿ ತಾಜ್‌ಮಹಲ್ ಅನ್ನು ಕೈಬಿಟ್ಟ ದಿಗಳ ಬಳಿಕ ಅವರು ಈ ಹೇಳಿಕೆ ನೀಡಿದ್ದರು. ‘‘ಸ್ಥಳ (ಪ್ರವಾಸೋದ್ಯಮ ಸ್ಥಳ)ಗಳ ಪಟ್ಟಿಯಿಂದ ತಾಜ್‌ಮಹಲ್ ಅನ್ನು ಕೈಬಿಟ್ಟಿರುವುದನ್ನು ನೋಡಲು ಹಲವು ಜನರಿಗೆ ನೋವಾಗುತ್ತಿದೆ. ಇದು ಯಾವ ರೀತಿಯ ಚರಿತ್ರೆ ? ತಾಜ್‌ಮಹಲ್ ನಿರ್ಮಿಸಿದ ವ್ಯಕ್ತಿ ತನ್ನ ತಂದೆಯನ್ನು ಜೈಲಿಗೆ ಹಾಕಿರುವುದು ಇತಿಹಾಸವೇ ? ತಾಜ್‌ಮಹಲ್ ಅನ್ನು ನಿರ್ಮಿಸಿದವನು ಉತ್ತರಪ್ರದೇಶ ಹಾ ಗೂ ಹಿಂದೂಸ್ತಾನದಲ್ಲಿ ಹಲವು ಹಿಂದೂಗಳನ್ನು ಗುರಿಯಾಗಿರಿಸಿರುವುದನ್ನು ನೀವು ಇತಿಹಾಸ ಎಂದು ಕರೆಯುತ್ತೀರಾ?’’ ಎಂದು ಅವರು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News