ರಾಹುಲ್ ಗಾಂಧಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ: ಕೌರ್ ವಾಗ್ದಾಳಿ

Update: 2021-01-15 17:54 GMT

ಹೊಸದಿಲ್ಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಬೆಂಬಲಿಸುವಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಆ ಪಕ್ಷದ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಆರೋಪಿಸಿ ಶಿರೋಮಣಿ ಅಕಾಲಿ ದಳದ ಮಾಜಿ ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

“ಮೊಸಳೆ ಕಣ್ಣೀರಿಡುವ ಮೊದಲು ಪಂಜಾಬಿಗಳನ್ನು ಖಲಿಸ್ತಾನಿಗಳು ಎಂದು ಕರೆದಿರುವುದೇಕೆ? ನಿಮ್ಮ ಅಜ್ಜಿ ಪಂಜಾಬಿಗಳ ಬಗ್ಗೆ ಇದೇ ಪದ ಬಳಸಿದ್ದೇಕೆ? ನೀವು ಅವರನ್ನು ಮಾದಕ ವ್ಯಸನಿಗಳೆಂದು ಏಕೆ ಕರೆದಿದ್ದೀರಿ?ಈ ಎಲ್ಲ ಪ್ರಶ್ನೆಗೆ ಉತ್ತರ ನೀಡಿದರೆ ಮಾತ್ರ ನೀವು ಪಂಜಾಬ್ ರೈತರೊಂದಿಗೆ ಮಾತನಾಡಬಹುದು’’ ಎಂದು ಕೌರ್ ಟ್ವೀಟಿಸಿದ್ದಾರೆ.

ಪಂಜಾಬ್ ನಲ್ಲಿ ರೈತರು ಧರಣಿ ನಡೆಸುತ್ತಿದ್ದಾಗ, ಸಂಸತ್ತಿನಲ್ಲಿ ಮಸೂದೆಗಳು ಅಂಗೀಕಾರವಾದಾಗ ನೀವು ಎಲ್ಲಿದ್ದೀರಿ? ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ 40 ಸಂಸದರು ಗೈರು ಹಾಜರಿದ್ದರು. ನಿಮ್ಮ ಪಂಜಾಬ್ ಮುಖ್ಯಮಂತ್ರಿ ಈಗ ಬಿಜೆಪಿ ನೇತೃತ್ವದ ಭಾರತ ಸರಕಾರದೊಂದಿಗೆ ಕೈಜೋಡಿಸಿದ್ದಾರೆ ಎಂದು ಕೌರ್ ಟ್ವೀಟ್ ನಲ್ಲಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News