×
Ad

ದಿಲ್ಲಿ ಹಿಂಸಾಚಾರಕ್ಕೆ ಕೇಂದ್ರ ಸರಕಾರವೇ ಕಾರಣ ಎಂದು ಆರೋಪಿಸಿ ಬಿಜೆಪಿ ತ್ಯಜಿಸಿದ ಹಿರಿಯ ಮುಖಂಡ

Update: 2021-01-28 22:39 IST
photo: yuvaharyana.com

ಚಂಡೀಗಢ,ಜ.28: ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರೊಂದಿಗೆ ಬೆಂಬಲ ಸೂಚಿಸಿ, ದಿಲ್ಲಿಯ ಟ್ರಾಕ್ಟರ್‌ ರ್ಯಾಲಿಯು ಹಿಂಸಾಚಾರಕ್ಕೆ ತಿರುಗಲು ಕೇಂದ್ರ ಸರಕಾರವೇ ಮುಖ್ಯ ಕಾರಣ ಎಂದು ಆರೋಪಿಸಿ ಮಾಜಿ ಮುಖ್ಯ ಸಂಸದೀಯ ಕಾರ್ಯದರ್ಶಿ ಹಾಗೂ ಹರ್ಯಾಣ ಬಿಜೆಪಿ ಮುಖಂಡ ರಾಮ್‌ ಪಾಲ್‌ ಮಜ್ರಾ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾಗಿ timesofindia.com ವರದಿ ಮಾಡಿದೆ.

ದಿಲ್ಲಿಯಲ್ಲಿ ರೈತರು ಶಾಂತಿಯುತ ರೀತಿಯಲ್ಲಿ ನಡೆಸಲುದ್ದೇಶಿಸಿದ್ದ ಟ್ರ್ಯಾಕ್ಟರ್‌ ರ್ಯಾಲಿಯನ್ನು ಹಿಂಸಾಚಾರವನ್ನಾಗಿ ಕೇಂದ್ರ ಸರಕಾರವು ಪರಿವರ್ತಿಸಿದೆ ಎಂದು ಅವರು ಆರೋಪಿಸಿದ್ದಾರೆ. ರಾಜಕೀಯದಲ್ಲಿ ಅವರ ಮುಂದಿನ ಹಾದಿಯ ಕುರಿತು ಸ್ಪಷ್ಟಪಡಿಸದ ಅವರು, ತಮ್ಮ ಆಲೋಚನಾ ಮಟ್ಟಕ್ಕೆ ಒಗುವ ಪಕ್ಷ ಹಾಗೂ ರೈತರ ಹಿತಾಸಕ್ತಿಯನ್ನು ಕಾಯುವ ಪಕ್ಷ ಯಾವುದೇ ಆದರೂ ನಾನು ಮುಂದೆ ಸೇರ್ಪಡೆಗೊಳ್ಳುತ್ತೇನೆ ಎಂದು ಅವರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News