×
Ad

ರೈತರ ಪ್ರತಿಭಟನಾ ಸ್ಥಳಕ್ಕೆ ನುಗ್ಗಿದ ಗುಂಪು: ಕಲ್ಲೆಸೆತ, ಟೆಂಟ್‌ ಗಳ ಧ್ವಂಸ

Update: 2021-01-29 14:25 IST
photo: ndtv.com

ಹೊಸದಿಲ್ಲಿ,ಜ.29: ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಸಿಂಘು ಬಾರ್ಡರ್‌ ನಲ್ಲಿ ರೈತರು ಪ್ರತಿಭಟನೆಯನ್ನು ಮುಂದುವರಿಸುತ್ತಿದ್ದು, ಈ ನಡುವೆ ಸ್ಥಳಕ್ಕೆ ಆಗಮಿಸಿದ 200ಕ್ಕೂ ಹೆಚ್ಚು ಮಂದಿಯಿದ್ದ ಗುಂಪೊಂದು ಪ್ರತಿಭಟನಾ ಸ್ಥಳದಲ್ಲಿ ವ್ಯಾಪಕ ಹಾನಿಯೆಸಗಿದ ಘಟನೆಯು ಶುಕ್ರವಾರ ನಡೆದಿದೆ. ಈ ಕುರಿತು ndtv.com ವರದಿ ಮಾಡಿದೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗುಂಪು ರೈತರ ಡೇರೆಗಳೆಡೆಗೆ ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೇ ಟೆಂಟ್‌ ಗಳನ್ನು ಧ್ವಂಸ ಮಾಡಲು ಪ್ರಯತ್ನಿಸಿತು ಎನ್ನಲಾಗಿದೆ. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಅಶ್ರುವಾಯು ಬಳಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಗಾಯಗೊಂಡಿದ್ದಾರೆ.

ರೈತರು ಬಳಸುತ್ತಿದ್ದ ವಾಶಿಂಗ್‌ ಮೆಶಿನ್‌ ಸೇರಿದಂತೆ ಹಲವಾರು ವಸ್ತುಗಳನ್ನು ನಾಶಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಾಝಿಪುರ್‌ ಮತ್ತು ಟಿಕ್ರಿ ಬಾರ್ಡರ್‌ ನಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News