ಸೈನಿಕರ ಕೋಟೆಯಾಗಿ ಮಾರ್ಪಟ್ಟ ಸಿಂಘು ಬಾರ್ಡರ್:‌ ಮಾಧ್ಯಮಗಳಿಗೂ ಪ್ರವೇಶವಿಲ್ಲ!

Update: 2021-01-29 10:15 GMT

ಹೊಸದಿಲ್ಲಿ,ಜ.29: 300ಕ್ಕೂ ಹೆಚ್ಚು ಮಂದಿಯಿದ್ದ ಗುಂಪೊಂದು ಸಿಂಘು ಬಾರ್ಡರ್‌ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಟೆಂಟ್‌ ಗಳ ಮೇಲೆ ಮತ್ತು ರೈತರ ಮೇಲೆ ಆಕ್ರಮಣ ಮಾಡಿದ್ದು, ಹಲವಾರು ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಎಂದು timesofindia.com ವರದಿ ಮಾಡಿದೆ. ಈ ನಡುವೆ ಇದೀಗ ಸಿಂಘು ಬಾರ್ಡರ್‌ ಅಕ್ಷರಶಃ ಸೈನಿಕರ ಕೋಟೆಯಾಗಿ ಮಾರ್ಪಟ್ಟಿದೆ ಎಂದು ವರದಿ ತಿಳಿಸಿದೆ.

ವರದಿಗಳ ಪ್ರಕಾರ, ಹೆಚ್ಚಿನ ಸಂಖ್ಯೆಯಲ್ಲಿನ ಪೊಲೀಸರು ಹಾಗೂ ಸೈನಿಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಲವಾರು ಬ್ಯಾರಿಕೇಡ್‌ ಗಳನ್ನು ಮತ್ತು ಕಾಂಕ್ರೀಟ್‌ ಬ್ಯಾರಿಕೇಡ್‌ ಗಳನ್ನೂ ಸ್ಥಾಪಿಸಲಾಗಿದೆ. ಸೈನಿಕರು ಸ್ಥಳದಲ್ಲಿ ಮಾರ್ಚ್‌ ನಡೆಸುತ್ತಿದ್ದು, ಮಾಧ್ಯಮಗಳು ಸೇರಿದಂತೆ ಯಾರನ್ನೂ ಸಿಂಘು ಬಾರ್ಡರ್‌ ಗೆ ತಲುಪಲು ಪೊಲೀಸರು ಅನುಮತಿಸುತ್ತಿಲ್ಲ ಎಂದು ವರದಿ ತಿಳಿಸಿದೆ.

ಸ್ಥಳೀಯರು ಆಕ್ರಮಣ ಮಾಡಿದ್ದಾರೆಂಬ ಆರೋಪಗಳು ಕೇಳಿ ಬಂದರೂ, ಸ್ಥಳೀಯರ ಸೋಗಿನಲ್ಲಿ ರೈತ ವಿರೋಧಿಗಳು ನಡೆಸಿದ ದಾಂಧಲೆ ಇದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಟಿಕ್ರಿ ಬಾರ್ಡರ್‌ ನಲ್ಲೂ ಬ್ಯಾನರ್‌ ಗಳನ್ನು ಹಿಡಿದು ಗುಂಪೊಂದು ಪ್ರತ್ಯಕ್ಷವಾಗಿದೆ ಎಂದು ndtv.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News