ಮೊದಲ ಟೆಸ್ಟ್: ಪಾಕ್‌ಗೆ ಏಳು ವಿಕೆಟ್‌ಗಳ ಜಯ
ಕರಾಚಿ: ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಪಾಕಿಸ್ತಾನ ಏಳು ವಿಕೆಟ್‌ಗಳ ಅಂತರದಲ್ಲಿ ಮಣಿಸಿದೆ.
ಟೆಸ್ಟ್‌ನ ನಾಲ್ಕನೇ ದಿನವಾಗಿರುವ ಶುಕ್ರವಾರ ದಕ್ಷಿಣ ಆಫ್ರಿಕವನ್ನು ಎರಡನೇ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿ, ಸುಲಭದ ಜಯ ದಾಖಲಿಸಿತು.
ಎರಡನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 88 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ 22.5 ಓವರ್‌ಗಳಲ್ಲಿ 90 ರನ್‌ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಅಝರ್ ಅಲಿ ಔಟಾಗದೆ 31 ರನ್ ಮತ್ತು ನಾಯಕ ಬಾಬರ್ ಆಝಮ್ 30 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಪಾಕ್‌ಗೆ ಸವಾಲು ಸುಲಭವಾಗಿದ್ದರೂ 23 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಬಿದ್ ಅಲಿ(10) ಮತ್ತು ಇಮ್ರಾನ್ ಬಟ್(12) ಅವರನ್ನು ಕಳೆದುಕೊಂಡಿತು. ಅನ್ರಿಚ್ ನಾರ್ಟ್ಜೆ ಒಂದೇ ಓವರ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಆತಿಥೇಯರನ್ನು ನಡುಗಿಸಿದರು. ಆದರೆ ನಾಯಕ ಬಾಬರ್ ಆಝಮ್ ಮತ್ತು ಅಝರ್ ಅಲಿ ಮೂರನೇ ವಿಕೆಟ್‌ಗೆ 63 ರನ್ ಸೇರಿಸಿದರು. ಗೆಲುವಿಗೆ ಇನ್ನೂ ಎರಡು ರನ್‌ಗಳ ಆವಶ್ಯಕತೆ ಇದ್ದಾಗ ನಾಯಕ ಆಝಮ್‌ರನ್ನು ಕೇಶವ ಮಹಾರಾಜ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ಫವಾದ್ ಆಲಮ್ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ತಂಡದ ಗೆಲುವಿನ ವಿಧಿ ವಿಧಾನ ಪೂರೈಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ಆಲಮ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
< ಆಫ್ರಿಕ 245ಕ್ಕೆ ಆಲೌಟ್: ಮೂರನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 75 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿದ್ದ ದಕ್ಷಿಣ ಆಫ್ರಿಕ ತಂಡ ನಾಲ್ಕನೇ ದಿನದಾಟ ಮುಂದುವರಿಸಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ಎಡಗೈ ಸ್ಪಿನ್ನರ್ ನೌಮಾನ್ ಅಲಿ (35ಕ್ಕೆ 5) ದಾಳಿಗೆ ಸಿಲುಕಿ 100.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟಾಗಿದೆ.
ಕೇಶವ್ ಮಹಾರಾಜ್ (2) ಮತ್ತು ಕ್ವಿಂಟನ್ ಡಿ ಕಾಕ್( 2) ಇವರನ್ನು ಕ್ರಮವಾಗಿ ಹಸನ್ ಅಲಿ ಮತ್ತು ಅಬಿದ್ ಅಲಿ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಆಫ್ರಿಕ ತಂಡಕ್ಕೆ ಆಘಾತ ನೀಡಿದರು. ಬಳಿಕ ಜಾರ್ಜ್ ಲಿಂಡಾ(11), ಕಾಗಿಸೊ ರಬಾಡ(1), ಆ್ಯನ್ರಿಚ್ ನೊರ್ಟ್ಜೆ(0), ತೆಂಬಾ ಬವುಮಾ(40) ಇವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ದಕ್ಷಿಣ ಆಫ್ರಿಕದ ಎರಡನೇ ಇನಿಂಗ್ಸ್ ನ್ನು ಮುಗಿಸಿದರು. ಎರಡನೇ ಮತ್ತು ಅಂತಿಮ ಟೆಸ್ಟ್ ಗುರುವಾರ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಪ್ರವಾಸದಲ್ಲಿ ದಕ್ಷಿಣ ಆಫ್ರಿಕ ಮೂರು ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. 2009 ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಉಗ್ರರ ದಾಳಿಯ ನಂತರ ಪಾಕಿಸ್ತಾನದಲ್ಲಿ ಮೊದಲ ಬಾರಿ ಪಂದ್ಯ ನಡೆದಿದೆ. ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕ 220 ರನ್‌ಗಳಿಗೆ ಆಲೌಟಾಗಿತ್ತು. ಫವಾದ್ ಆಲಂ (109) ಶತಕದ ನೆರವಿನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 387 ರನ್ ಗಳಿಸುವ ಮೂಲಕ ಪಾಕಿಸ್ತಾನ 133 ರನ್‌ಗಳ ಮುನ್ನಡೆ ಸಾಧಿಸಿತ್ತು.