​ರೈತರ ಹೋರಾಟಕ್ಕೆ ಏಕತೆ ಪ್ರದರ್ಶಿಸಲು ಸರ್ವಪಕ್ಷ ಸಭೆ ಕರೆದ ಅಮರಿಂದರ್ ಸಿಂಗ್

Update: 2021-01-31 10:27 GMT

ಚಂಡೀಗಡ: ದಿಲ್ಲಿ ಗಡಿಯಲ್ಲಿರುವ ತಮ್ಮ ಪ್ರತಿಭಟನಾ ಸ್ಥಳದಲ್ಲಿ ಪಂಜಾಬ್ ನ ರೈತರನ್ನು ಪೊಲೀಸರು ಥಳಿಸಿದ್ದಾರೆ ಹಾಗೂ ಗೂಂಡಾಗಳಿಂದ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಮಂಗಳವಾರ ಸರ್ವಪಕ್ಷ ಸಭೆ ಕರೆದು ಏಕತೆ ತೋರಿಸಲು ಹಾಗೂ ಮೂರು ವಿವಾದಾತ್ಮಕ ಕೇಂದ್ರ ಕೃಷಿ ಕಾನೂನುಗಳ ಕುರಿತು ಮುಂದಿನ ಹಾದಿಯಲ್ಲಿ ಒಮ್ಮತ ರೂಪಿಸಲು ನಿರ್ಧರಿಸಿದ್ದಾರೆ.

ರವಿವಾರ ಹೊರಡಿಸಲಾಗಿರುವ ಸರಕಾರದ ಹೇಳಿಕೆಯಲ್ಲಿ ಸಭೆಯು ಬೆಳಗ್ಗೆ 11ಕ್ಕೆ ಪಂಜಾಬ್ ಭವನದಲ್ಲಿ ನಡೆಯಲಿದೆ.
ಇದು ಅಹಂಕಾರ ಪ್ರದರ್ಶಿಸುವ ಸಮಯವಲ್ಲ. ಆದರೆ ಇದು ನಮ್ಮ ರಾಜ್ಯ ಹಾಗೂ ನಮ್ಮ ಜನರನ್ನು ಉಳಿಸಲು ಒಗ್ಗೂಡಬೇಕಾದ ಸಮಯ. ರೈತರಿಗೆ ಬೆಂಬಲವಾಗಿ  ಹಾಗೂ ಪಂಜಾಬ್ ಹಿತದೃಷ್ಟಿಯಿಂದ ಎಲ್ಲಾ ಪಕ್ಷಗಳು ಏಕತೆಯ ಮನೋಭಾವದಿಂದ ಸಭೆಗೆ ಸೇರಬೇಕೆಂದು ಎಂದು ಸಿಎಂ ಅಮರಿಂದರ್ ಎಲ್ಲ ಪಕ್ಷಗಳಿಗೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News