ದೀಪ್ ಸಿಧು ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ದಿಲ್ಲಿ ಪೊಲೀಸರು

Update: 2021-02-03 08:05 GMT

ಹೊಸದಿಲ್ಲಿ,ಫೆ.02: ಗಣತಂತ್ರ ದಿನದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಹಾಗೂ ಕೆಂಪು ಕೋಟೆ ಸಂಕೀರ್ಣದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ  ಎಫ್‍ಐಆರ್ ನಲ್ಲಿ ಹೆಸರಿಸಲಾಗಿರುವ ಪಂಜಾಬಿ ನಟ ದೀಪ್ ಸಿಧು  ಹಾಗೂ ಇತರ ಮೂವರ ಕುರಿತು ಮಾಹಿತಿ ಒದಗಿಸಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ದಿಲ್ಲಿ ಪೊಲೀಸರು ಘೋಷಿಸಿದ್ದಾರೆ ಎಂದು ndtv.com ವರದಿ ಮಾಡಿದೆ. 

ಜತೆಗೆ ಕಳೆದ ಮಂಗಳವಾರದ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ  ಪೊಲೀಸರಿಗೆ ಬೇಕಾದ ಇತರ ನಾಲ್ಕು ಮಂದಿ ಜಗ್ಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಹಾಗೂ ಜಬಾಲ್ ಸಿಂಗ್ ಅವರ ಕುರಿತು ಮಾಹಿತಿ ನೀಡಿದವರಿಗೆ ರೂ 50,000 ನಗದು ಬಹುಮಾನ ಘೋಷಿಸಲಾಗಿದೆ.

ಜನವರಿ 26ರ ಘಟನೆ ಸಂಬಂಧ ಪೊಲೀಸರಿಗೆ ಬೇಕಾದ 12 ಮಂದಿ  ಇತರ ಆರೋಪಿಗಳ ಚಿತ್ರಗಳನ್ನೂ ದಿಲ್ಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ಬಿಡುಗಡೆಗೊಳಿಸಿದೆ. ಘಟನೆಯ ಹಲವು ವೀಡಿಯೋಗಳ ಆಧಾರದಲ್ಲಿ ಈ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದ್ದು ಆರೋಪಿಗಳು ಕೈಗಳಲ್ಲಿ ಬೆತ್ತ ಅಥವಾ ಲಾಠಿ ಹಿಡಿದುಕೊಂಡಿರುವುದು ಕಾಣಿಸುತ್ತದೆ.

ಜನವರಿ 26ರ ಹಿಂಸಾಚಾರ ಸಂಬಂಧ ಪೊಲೀಸರು ಇಲ್ಲಿಯ ತನಕ 44 ಪ್ರಕರಣಗಳನ್ನು ದಾಖಲಿಸಿ 122 ಮಂದಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News