×
Ad

ರಾಕೇಶ್‌ ಟಿಕಾಯತ್‌, ರೈತ ಮುಖಂಡರಿದ್ದ 'ಮಹಾಪಂಚಾಯತ್‌ʼ ವೇದಿಕೆ ಕುಸಿತ

Update: 2021-02-03 17:07 IST

ಜಿಂದ್(ಹರ್ಯಾಣ): ರೈತರ 'ಮಹಾಪಂಚಾಯತ್' ಅಥವಾ ಸಭೆಯ ವೇದಿಕೆಯು ಕುಸಿದುಬಿದ್ದಿರುವ ಘಟನೆ ಹರ್ಯಾಣದ ಜಿಂದ್ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ರೈತ ಮುಖಂಡ ರಾಕೇಶ್ ಟಿಕಾಯತ್,ಭಾರತೀಯ ಕಿಸಾನ್ ಯೂನಿಯನ್(ರಾಜಕೀಯೇತರ)ಹಾಗೂ ಇತರ ರೈತ ನಾಯಕರು ವೇದಿಕೆ ಮೇಲಿದ್ದಾಗಲೇ ಹಠಾತ್ತನೆ ವೇದಿಕೆಯು ಕುಸಿಯಿತು. ಯಾವುದೇ ಗಾಯವಾಗಿರುವ ಕುರಿತು ವರದಿಯಾಗಿಲ್ಲ.

ಟಿಕಾಯತ್ ಹಾಗೂ ಇತರರು ರೈತರನ್ನು ಉದ್ದೇಶಿಸಿ ಮಾತನಾಡಲು ಮೈಕನ್ನು ಹಿಡಿದಿರುವಾಗಲೇ ವೇದಿಕೆ ಕುಸಿದಿರುವ ದೃಶ್ಯ  ವೀಡಿಯೊದಲ್ಲಿ ಸೆರೆಯಾಗಿದೆ. ವೇದಿಕೆ ಮೇಲಿನ ನಾಯಕರ ಮಾತನ್ನು ಕೇಳಲು ಮೈದಾನದಲ್ಲಿ ಕುಳಿತ್ತಿದ್ದ ಜನರು ಈ ಘಟನೆಯಿಂದ ಆಘಾತಕ್ಕೀಡಾದರು.

ಮಹಾ ಪಂಚಾಯತ್ ಅನ್ನು ಹರ್ಯಾಣದ ಖಾಪ್ ಅಥವಾ ಸ್ವಯಂ ನೇಮಕಗೊಂಡಿರುವ ಹಳ್ಳಿಯ ನ್ಯಾಯಾಲಯ ಆಯೋಜಿಸಿತ್ತು. ರಾಕೇಶ್ ಟಿಕಾಯತ್ ಹಾಗೂ ವಿವಿಧ ರೈತ ಸಂಘಟನೆಗಳ ನಾಯಕರು ಜನರನ್ನು ಉದ್ದೇಶಿಸಿ ಮಾತನಾಡುವವರಿದ್ದರು.

ಕಳೆದ ಕೆಲವು ದಿನಗಳಲ್ಲಿ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ಇಂತಹ ಹಲವಾರು ಸಭೆಗಳನ್ನು ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News