ವಿದ್ಯಾರ್ಥಿನಿಗೆ ರ‍್ಯಾಗಿಂಗ್ ನಡೆಸಿ ಆತ್ಮಹತ್ಯೆಗೆ ಪ್ರಚೋದನೆ: 4 ಮಹಿಳೆಯರಿಗೆ ಜೈಲುಶಿಕ್ಷೆ

Update: 2021-02-06 17:16 GMT

ಭೋಪಾಲ, ಫೆ.6: ಭೋಪಾಲದ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ರ್ಯಾಗಿಂಗ್ ನಡೆಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಮಧ್ಯಪ್ರದೇಶದ ನ್ಯಾಯಾಲಯ 4 ಮಹಿಳೆಯರಿಗೆ 5 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2013ರ ಆಗಸ್ಟ್‌ನಲ್ಲಿ ಈ ಪ್ರಕರಣ ನಡೆದಿತ್ತು. ಭೋಪಾಲದ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ 18 ವರ್ಷದ ಯುವತಿಯ ಮೇಲೆ ಅದೇ ಕಾಲೇಜಿನ 4 ಹಿರಿಯ ವಿದ್ಯಾರ್ಥಿನಿಯರು ರ‍್ಯಾಗಿಂಗ್ ನಡೆಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರು. ಇದರಿಂದ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಆತ್ಮಹತ್ಯೆಗೆ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಕಾರಣರಾದ 4 ವಿದ್ಯಾರ್ಥಿನಿಯರ ಹೆಸರನ್ನು ಉಲ್ಲೇಖಿಸಿದ್ದರು ಎಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ಆರೋಪಿಗಳಾದ ದೇವಾಂಶಿ ಶರ್ಮ, ಕೀರ್ತಿ ಗೌರ್, ದೀಪ್ತಿ ಸೋಳಂಕಿ ಮತ್ತು ನಿಧಿ ಮಾಗ್ರೆ ದೋಷಿಗಳೆಂದು ತೀರ್ಪಿತ್ತು 5 ವರ್ಷದ ಜೈಲುಶಿಕ್ಷೆ ಹಾಗೂ ತಲಾ 2,000 ರೂ. ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News