ಪಂಜಾಬ್ ನಲ್ಲಿ ಮೊದಲ ಕಿಸಾನ್ ಮಹಾ ಪಂಚಾಯತ್: ಲಕ್ಷಕ್ಕೂ ಅಧಿಕ ರೈತರು ಭಾಗಿ

Update: 2021-02-11 16:14 GMT

ಲುಧಿಯಾನ: ಕೇಂದ್ರ ಸರಕಾರದ 3 ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಹೋರಾಟವು ಈಗ ಸುತ್ತಮುತ್ತಲಿನ ರಾಜ್ಯಗಳಿಗೂ ಹರಡಿದೆ. ಕಿಸಾನ್ ಮಹಾ ಪಂಚಾಯತ್ ನ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಸಭೆಗಳಿಗೆ ಲಕ್ಷಾಂತರ ರೈತರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ.

ರೈತ ಚಳುವಳಿ ಉತ್ತುಂಗದಲ್ಲಿರುವ ಪಂಜಾಬ್ ನಲ್ಲಿ ಗುರುವಾರ ಮೊದಲ ಕಿಸಾನ್ ಮಹಾ ಪಂಚಾಯತ್ ನಡೆದಿದ್ದು, ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿ ಮಹಾ ಪಂಚಾಯತ್  ಯಶಸ್ವಿಗೊಳಿಸಿದ್ದಾರೆ.

ಪಂಜಾಬ್ ನ ಲುಧಿಯಾನ ಜಿಲ್ಲೆಯ ಜಾಗ್ರಾವ್ನ್ ಮಾರುಕಟ್ಟೆಯಲ್ಲಿ ಪಂಜಾಬ್ ನ 31 ರೈತ ಸಂಘಟನೆಗಳು ಜಂಟಿಯಾಗಿ ಕಿಸಾನ್ ಮಹಾ ಪಂಚಾಯತ್ ಆಯೋಜಿಸಿದ್ದವು. ಮಾರುಕಟ್ಟೆಯ ಅಂಗಳದ ತುಂಬೆಲ್ಲೆಲ್ಲಾ ರೈತರು ಜಮಾಯಿಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ತಾರು ರೈತ ಮುಖಂಡರು ಭಾಗಿಯಾಗಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಮೇರೆಗೆ ಹೋರಾಟ ತೀವ್ರಗೊಳಿಸಲು ನಿರ್ದರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News