ನೀವು ನ್ಯಾಯಾಲಯಕ್ಕೆ ಹೋದರೆ ನಿಮಗೆ ನ್ಯಾಯ ಸಿಗುವುದಿಲ್ಲ: ನಿವೃತ್ತಿಯ 15 ತಿಂಗಳ ಬಳಿಕ ಹೇಳಿಕೆ ನೀಡಿದ ರಂಜನ್‌ ಗೊಗೋಯ್

Update: 2021-02-12 16:53 GMT

ಹೊಸದಿಲ್ಲಿ: ನಾನು ಸಮಸ್ಯೆಗಳನ್ನು ಹೇಳಿಕೊಂಡು ನ್ಯಾಯಾಲಯಕ್ಕೆ ಹೋಗುವುದಿಲ್ಲ. ಏಕೆಂದರೆ ತೀರ್ಪಿಗಾಗಿ ಕೊನೆಯಿಲ್ಲದೆ ಕಾಯಬೇಕಾಗುತ್ತದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಸಿಜೆಐ ಆಗಿ ನಿವೃತ್ತಿಯಾದ 15 ತಿಂಗಳ ಬಳಿಕ ಗೊಗೋಯ್ ನೀಡಿರುವ ಈ ಹೇಳಿಕೆಯು ರಾಷ್ಟ್ರದ ಕಾನೂನು ವ್ಯವಸ್ಥೆಯ ವಾಸ್ತವಾಂಶವನ್ನು ತೆರೆದಿಟ್ಟಿದೆ ಎಂದು theprint.in ವರದಿ ಮಾಡಿದೆ.

“ನೀವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಬಯಸುತ್ತೀರಿ. ಆದರೆ, ನೀವು ನ್ಯಾಯಾಂಗವನ್ನು ಕುಸಿಯುವಂತೆ ಮಾಡಿದ್ದೀರಿ ಎಂದು 2019ರ ನವೆಂಬರ್ ನಲ್ಲಿ ದೇಶದ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿರುವ ಗೊಗೋಯ್ ಹೇಳಿದರು. ಗೊಗೋಯ್ ಸದ್ಯ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿದ್ದಾರೆ. ಗೊಗೋಯ್ ಸುದ್ದಿಜಾಲವಾದ ಇಂಡಿಯಾ ಟುಡೇ ಗ್ರೂಪ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಗೊಗೋಯ್ ಅವರ ಹೇಳಿಕೆಯು ನ್ಯಾಯಾಂಗದ ಸಾಮರ್ಥ್ಯ ಹಾಗೂ  ಪರಿಣಾಮಕಾರಿತ್ವವನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಮಾಡಿದೆ. ತಡವಾದ ತೀರ್ಪುಗಳು ಹಾಗೂ ಒಪ್ಪಂದಗಳನ್ನು ಜಾರಿಗೊಳಿಸುವುದರಿಂದ ಭಾರತದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಏಶ್ಯದ ಮೂರನೇ ಅತಿ ದೊಡ್ಡ ಆರ್ಥಿಕತೆಯ ನ್ಯಾಯಾಲಯದ ವ್ಯವಸ್ಥೆಗಳು 43 ದಶಲಕ್ಷಕ್ಕೂ ಅಧಿಕ ಪ್ರಕರಣಗಳಿಂದ ಮುಚ್ಚಿಹೋಗಿವೆ. ನ್ಯಾಯಾಧೀಶರ ಕೊರತೆಯೆಂದರೆ ಕೆಲವು ಪ್ರಕರಣಗಳು ಪರಿಹಾರವನ್ನು ಕಂಡುಹಿಡಿಯಲು ವರ್ಷಗಳು, ದಶಕಗಳವರೆಗೆ ತೆಗೆದುಕೊಳ್ಳಬಹುದು. ಭಾರತದಲ್ಲಿ ಹೂಡಿಕೆ ಮಾಡುವ ಕಂಪೆನಿಗಳು ಒಮ್ಮೆ ಕಾನೂನು ವಿವಾದದಲ್ಲಿ ಸಿಲುಕಿಕೊಂಡರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ವರದಿಯು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News