'ಟ್ರಾನ್ಸಿಟ್‌ ರಿಮ್ಯಾಂಡ್‌' ನೀಡದೇ ದಿಶಾ ರವಿಯನ್ನು ಬಂಧಿಸಿದ್ದ ದಿಲ್ಲಿ ಪೊಲೀಸರು?

Update: 2021-02-15 08:35 GMT

ಬೆಂಗಳೂರು: ರೈತರ ಪ್ರತಿಭಟನೆಯ ಕುರಿತಾದಂತೆ ಇರುವ ಟೂಲ್ ಕಿಟ್ ಅನ್ನು ಎಡಿಟ್ ಮಾಡಿದ್ದಾರೆ ಎಂದು ಆರೋಪಿಸಿ  ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನು ಪೊಲೀಸರು ಅವರ ನಿವಾಸದಿಂದ ಬಂಧಿಸಿದ್ದರು. ಈ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ದಿಶಾ ರವಿಯನ್ನು ಬಂಧಿಸುವ ವೇಳೆ ಪೊಲೀಸರು ಟ್ರಾನ್ಸಿಟ್ ರಿಮ್ಯಾಂಡ್ ನೀಡಿರಲಿಲ್ಲ ಎಂದು ಅವರು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಇನ್ನೊಂದು ಕಡೆಗೆ ಕರೆದೊಯ್ಯುವ ವೇಳೆ ಟ್ರಾನ್ಸಿಟ್ ರಿಮ್ಯಾಂಡ್ ಅನ್ನು ಪೊಲೀಸರು ನೀಡಬೇಕಾಗುತ್ತದೆ. ಆದರೆ ದಿಲ್ಲಿ ಪೊಲೀಸರು ಟ್ರಾನ್ಸಿಟ್ ರಿಮ್ಯಾಂಡ್ ನೀಡಿಲ್ಲ ಎಂದು ಸಾಕೇತ್ ಗೋಖಲೆ ಆರೋಪಿಸಿದ್ದಾರೆ.

"ಬೆಂಗಳೂರಿನಿಂದ ದಿಲ್ಲಿಗೆ ಪೊಲೀಸರು ಕರೆದೊಯ್ಯಬೇಕಾದರೆ ಟ್ರಾನ್ಸಿಟ್ ರಿಮ್ಯಾಂಡ್ ನೀಡಬೇಕು. ಆದರೆ ದಿಶಾ ರವಿಯನ್ನು ಕರೆದೊಯ್ಯುವಾಗ ಪೊಲೀಸರು ಟ್ರಾನ್ಸಿಟ್ ರಿಮ್ಯಾಂಡ್ ಹಾಜರುಪಡಿಸಿರಲಿಲ್ಲ. ಮೇಲ್ನೋಟಕ್ಕೆ ಅನ್ಯಾಯವಾಗಿ ವಶಕ್ಕೆ ಪಡೆದುಕೊಂಡಂತಿದೆ. ನಾನು ಈಗಾಗಲೇ ಟ್ರಾನ್ಸಿಟ್ ರಿಮ್ಯಾಂಡ್ ಪ್ರತಿ ನೀಡುವಂತೆ ಆರ್ಟಿಐ ಅರ್ಜಿಯನ್ನು ಸಲ್ಲಿಸಿದ್ದೇನೆ. ಕಾನೂನಿನ ಪ್ರಕಾರ ದಿಲ್ಲಿ ಪೊಲೀಸರು ಇದಕ್ಕೆ 48 ಗಂಟೆಗಳ ಒಳಗೆ ಉತ್ತರ ನೀಡಬೇಕು" ಎಂದು ಸಾಖೇತ್ ಗೋಖಲೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News