ಸಾಮಾಜಿಕ ತಾಣದಲ್ಲಿ ವಿದ್ಯಾರ್ಥಿಗಳ ಆಂದೋಲನ: 'ಮೋದಿ ಉದ್ಯೋಗ ನೀಡಿ' ಟ್ರೆಂಡಿಂಗ್

Update: 2021-02-21 14:14 GMT

ಹೊಸದಿಲ್ಲಿ: ಉದ್ಯೋಗ ನೀಡುವಂತೆ ಆಗ್ರಹಿಸಿ ಹಲವಾರು ವಿದ್ಯಾರ್ಥಿಗಳು ಮತ್ತು ಯುವಕರು ಸಾಮಾಜಿಕ ತಾಣದಾದ್ಯಂತ ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. 'ಮೋದಿ ರೋಜ್ ಗಾರ್ ದೋ' ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ ನಾದ್ಯಂತ ಟ್ರೆಂಡಿಂಗ್ ಆಗಿದೆ. ಈಗಾಗಲೇ 1.6 ಮಿಲಿಯನ್ (16 ಲಕ್ಷ) ಗೂ ಹೆಚ್ಚು ಟ್ವೀಟ್ ಗಳನ್ನು ಮಾಡಿದ್ದು, ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

"ಹಲವಾರು ಮಂದಿ ಯುವಕರು ಕೆಲಸವಿಲ್ಲದೇ ಕಷ್ಟಪಡುತ್ತಿದ್ದಾರೆ. ನೀವು ಭರವಸೆ ನೀಡಿದ್ದ ಉದ್ಯೋಗವನ್ನು ಇನ್ನಾದರೂ ನೀಡಿ" ಎಂದು ಯುವಕರು ಸರಕಾರವನ್ನು ಆಗ್ರಹಿಸಿದ್ದಾರೆ. "ಯುವಕರು ಉದ್ಯೋಗವಿಲ್ಲದಾಗಿದ್ದಾರೆ, ರೈತರಿಗೆ ಕನೊಷ್ಠ ಬೆಂಬಲ ಬೆಲೆ ದೊರಕುತ್ತಿಲ್ಲ. ಜಿಡಿಪಿ ಸಂಪೂರ್ಣವಾಗಿ ಇಳಿಮುಖದತ್ತ ಸಾಗಿದೆ. ನಿರುದ್ಯೋಗವು ಹೆಚ್ಚಾಗಿದೆ. ಆದರೆ ಪ್ರಧಾನಿ ಮಾತ್ರ ಕೇವಲ ಭಾಷಣ ಮಾಡುತ್ತಿದ್ದಾರೆ" ಎಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ.

ಈ ಕುರಿತಾದಂತೆ ಇನ್ನೂ ಹೆಚ್ಚಿನ ಟ್ವೀಟ್ ಗಳು ಈ ಕೆಳಗಿನಂತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News