ಸಿಬಿಎಸ್‌ಇ ಬೋರ್ಡ್ ಪರೀಕ್ಷೆ: 10ನೇ, 12ನೇ ತರಗತಿಯ ವೇಳಾಪಟ್ಟಿ ಪರಿಷ್ಕೃತ

Update: 2021-03-05 13:46 GMT

ಹೊಸದಿಲ್ಲಿ: 10 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶುಕ್ರವಾರ ಸಿಬಿಎಸ್‌ಇ ತನ್ನ ಅಧಿಕೃತ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ. ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಹಾಜರಾಗುವ ಅಭ್ಯರ್ಥಿ ವೇಳಾಪಟ್ಟಿಯನ್ನು ಬೋರ್ಡ್ ವೆಬ್ ಸೈಟ್ cbse.gov.in.ಅನ್ನು ಪರೀಕ್ಷಿಸಬಹುದು.

10ನೇ ತರಗತಿಯ ವಿಜ್ಞಾನ ಪರೀಕ್ಷೆಯು ಮೇ 21ಕ್ಕೆ ಮುಂದೂಡಿಕೆಯಾಗಿದೆ. ಈ ಹಿಂದೆ ಇದು ಮೇ 15ಕ್ಕೆ ನಿಗದಿಯಾಗಿತ್ತು. ಮೇ 21ರಂದು ನಡೆಯಬೇಕಾಗಿದ್ದ ಗಣಿತ ಪರೀಕ್ಷೆ ಜೂ.2ರಂದು ನಿಗದಿಯಾಗಿದೆ. ಪರೀಕ್ಷೆಯು ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರ ತನಕ ನಡೆಯಲಿದೆ.

12ನೇ ತರಗತಿಯ ವಿಜ್ಞಾನ ವಿಭಾಗದ ಭೌತ ಶಾಸ್ತ್ರ ಪರೀಕ್ಷೆಯು ಮೇ 13ರ ಬದಲಿಗೆ ಜೂನ್ 8ಕ್ಕೆ ಮುಂದೂಡಲಾಗಿದೆ. ಗಣಿತ ಹಾಗೂ ಅನ್ವಯಿಕ ಗಣಿತ ಪರೀಕ್ಷೆಯು ಮೇ 31ರಂದು ನಡೆಯಲಿದೆ.

ವಾಣಿಜ್ಯ ವಿಭಾಗದ ಗಣಿತ ಹಾಗೂ ಅನ್ವಯಿಕ ಗಣಿತ ಪರೀಕ್ಷೆಯು ಕೂಡ ಮೇ 31ರಂದು ನಡೆಯಲಿದೆ.

ಪರೀಕ್ಷಾ ಮಂಡಳಿಯು ಕಲಾ ವಿಭಾಗದ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಿದ್ದು ಭೌಗೋಳಿಕ ಪತ್ರಿಕೆಯ ಪರೀಕ್ಷೆಯು ಜೂನ್ 2ರ ಬದಲಿಗೆ ಜೂ.3ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News