×
Ad

ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ 'ರೈತ ಪ್ರತಿಭಟನೆ' ಕುರಿತು ಗಮನ ಸೆಳೆದ ಯೂಟ್ಯೂಬರ್ ಲಿಲ್ಲಿ ಸಿಂಗ್

Update: 2021-03-15 14:03 IST

ಹೊಸದಿಲ್ಲಿ: ಗ್ರಾಮ್ಮಿ ಅವಾರ್ಡ್ ಸಮಾರಂಭಕ್ಕೆ 'ಐ ಸ್ಟ್ಯಾಂಡ್ ವಿದ್ ಫಾರ್ಮರ್ಸ್' ಎಂದು ಬರೆದಿದ್ದ ಮಾಸ್ಕ್ ಧರಿಸಿ ಬಂದು ಯೂಟ್ಯೂಬರ್ ಹಾಗೂ ಕಂಟೆಂಟ್ ಕ್ರಿಯೇಟರ್ ಲಿಲ್ಲಿ ಸಿಂಗ್ ಎಲ್ಲರ ಗಮನ ಸೆಳೆದಿದ್ದಾರೆ.

"ರೆಡ್ ಕಾರ್ಪೆಟ್/ಪ್ರಶಸ್ತಿ ಸಮಾರಂಭಗಳ ಚಿತ್ರಗಳು ಯಾವತ್ತೂ ಬಹಳ ಪ್ರಚಾರ ಪಡೆಯುತ್ತವೆ. ಆದುದರಿಂದ ಮಾಧ್ಯಮಗಳೇ ಇಲ್ಲಿವೆ, ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಬಳಸಿ #ಐಸ್ಟ್ಯಾಂಡ್‍ವಿದ್‍ಫಾರ್ಮರ್ಸ್ #ಗ್ರಾಮ್ಮೀಸ್" ಎಂದು ನಂತರ ಲಿಲ್ಲಿ ಸಿಂಗ್ ತಮ್ಮ ಇನ್‍ಸ್ಟಾಗ್ರಾಂ ಮತ್ತು ಟ್ವಿಟರ್ ಪುಟದಲ್ಲಿ ಬರೆದಿದ್ದಾರೆ.

ಅವರ ಈ ಪೋಸ್ಟ್ ಅನ್ನು ಸ್ವಲ್ಪವೇ ಹೊತ್ತಿನಲ್ಲಿ 1,00,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ರೂಪದರ್ಶಿ ಅಮಂಡಾ ಸೆರ್ನಿ ಹಾಗೂ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಸುನಿಲ್ ಸಿಂಗ್ ಅವರ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.

ಪ್ರಸ್ತುತ ಕೆನಡಾ ನಾಗರಿಕರಾಗಿರುವ ಲಿಲ್ಲಿ ಸಿಂಗ್ ಅವರ ಹೆತ್ತವರು ಪಂಜಾಬ್ ಮೂಲದವರಾಗಿದ್ದು ಇನ್‍ಸ್ಟಾಗ್ರಾಂನಲ್ಲಿ ಅವರಿಗೆ 9 ಮಿಲಿಯನ್ ಫಾಲೋವರ್ಸ್ ಹಾಗೂ ಯುಟ್ಯೂಬ್‍ನಲ್ಲಿ 14 ಮಿಲಿಯನ್ ಚಂದಾದಾರರಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ವೈರಲ್ ಆದ ಟಿಕ್ ಟಾಕ್ ವೀಡಿಯೋವೊಂದರಲ್ಲಿ ಆಕೆ ತನ್ನ ಫಾಲೋವರ್ಸ್‍ಗೆ  ಭಾರತದಲ್ಲಿ ನಡೆಯುತ್ತಿರುವ ಇತಿಹಾಸದ ಅತ್ಯಂತ ದೊಡ್ಡ ಪ್ರತಿಭಟನೆಯ ಕುರಿತು ತಿಳಿದುಕೊಳ್ಳುವಂತೆ ಹೇಳಿದ್ದರು.ಸುಪರ್ ವುಮನ್ ಖ್ಯಾತಿಯ ಸಿಂಗ್ ಅವರು ರೈತರಿಗೆ ಹಾಗೂ ಶಾಂತಿಯುತವಾಗಿ ಹೋರಾಡುವ ಅವರ ಹಕ್ಕಿಗೆ ಬೆಂಬಲ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News