ಕೊರೋನ ನಿಯಮಗಳು ಜನಸಾಮಾನ್ಯರಿಗಷ್ಟ್ಟೆಯೇ?

Update: 2021-03-18 17:52 GMT

ಮಾನ್ಯರೇ,

ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ದೇಶದಾದ್ಯಂತ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲೂ ಬಹುತೇಕ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಪರಿಸ್ಥಿತಿ ಕೈ ಮೀರುವ ಹಂತ ತಲುಪಿದೆಯೆಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಹೀಗಾಗಿ ರಾಜ್ಯದ ಜನತೆಗೆ ಕೊರೋನ ಎರಡನೇ ಅಲೆಯ ಭೀತಿ ಶುರುವಾಗಿದೆ. ಇಷ್ಟು ದಿನ ಸಭೆ-ಸಮಾರಂಭಗಳು, ರಾಜಕೀಯ ಸಮಾವೇಶಗಳು, ಧಾರ್ಮಿಕ ಸಮಾವೇಶಗಳು ಸೇರಿದಂತೆ ಲಕ್ಷಾಂತರ ಜನ ಸೇರುವ ಕಾರ್ಯಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿತ್ತು. ಈಗ ಕೋವಿಡ್ ಹರಡುವಿಕೆಯ ವೇಗಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಪರೀಕ್ಷಾ ಪ್ರಮಾಣ ಹೆಚ್ಚಳ, ಸಭೆ-ಸಮಾರಂಭಗಳಿಗೆ ಜನರ ಮಿತಿ ಸೇರಿದಂತೆ ಹೊಸದಾಗಿ ಮಾರ್ಗಸೂಚಿ ಹೊರಡಿಸಿದೆ. ಸರಕಾರ ಈ ಮೊದಲೇ ಎಚ್ಚೆತ್ತುಕೊಂಡು ಸಭೆ-ಸಮಾರಂಭ, ರಾಜಕೀಯ, ಧಾರ್ಮಿಕ ಸಮಾವೇಶಗಳಲ್ಲಿ ಬಿಗಿ ನಿಯಮಗಳನ್ನು ಮುಂದುವರಿಸಿಕೊಂಡು ಬಂದಿದ್ದರೆ ರಾಜ್ಯದಲ್ಲಿ ಇಂದು ಕೊರೋನ ಹೆಚ್ಚಾಗುವ ಪರಿಸ್ಥಿತಿ ಬರುತ್ತಿರಲಿಲ್ಲ.
ಕೇವಲ ಮದುವೆ ಸಮಾರಂಭಗಳು, ಸಾರ್ವಜನಿಕ ಸ್ಥಳಗಳಲ್ಲಿನ ಜನಸಾಮಾನ್ಯರನ್ನೇ ಗುರಿಯಾಗಿರಿಸಿ ದಂಡ ವಿಧಿಸುವ ಬದಲು ರಾಜಕೀಯ ಪ್ರೇರಿತ ಕಾರ್ಯಕ್ರಮಗಳ ಬಗ್ಗೆಯೂ ವಿಶೇಷವಾಗಿ ಗಮನಹರಿಸಿದರೆ ಮಾತ್ರ ಕೊರೋನ ನಿಯಂತ್ರಣಕ್ಕೆ ಬರಬಹುದು.

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News