ಮಾನಹಾನಿ ಪ್ರಕರಣ: ಕಂಗನಾ ರಣಾವತ್ ಗೆ ಜಾಮೀನು
Update: 2021-03-25 18:29 IST
ಮುಂಬೈ: ಬರಹಗಾರ ಹಾಗೂ ಗೀತೆ ರಚನೆಕಾರ ಜಾವೇದ್ ಅಖ್ತರ್ ದಾಖಲಿಸಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ನ್ಯಾಯಾಲಯವು ನಟಿ ಕಂಗನಾ ರಣಾವತ್ ಗೆ ಗುರುವಾರ ಜಾಮೀನು ನೀಡಿದೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.
ನ್ಯಾಯಾಲಯಕ್ಕೆ ಹಾಜರಾದ ರಣಾವತ್ ತನ್ನ ವಿರುದ್ಧದ ಹೊರಡಿಸಲಾಗಿರುವ ಜಾಮೀನು ವಾರಂಟ್ ರದ್ದುಪಡಿಸುವಂತೆ ಕೋರಿದ್ದರು. ನ್ಯಾಯಾಲಯವು ಅನುಮತಿಸಿದ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಕಳೆದ ವರ್ಷ ಜೂನ್ ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನ ನಂತರ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ರಣಾವತ್ ಅವರು ಬಾಲಿವುಡ್ ಕುರಿತು ಉಲ್ಲೇಖಿಸುವಾಗ ತನ್ನ ವಿರುದ್ಧ ಮನಹಾನಿಕರ ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಅಖ್ತರ್ ತಿಳಿಸಿದ್ದರು.