ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಸಿಆರ್ ಪಿಎಫ್ ಅಧಿಕಾರಿ ಹುತಾತ್ಮ, ಮೂವರಿಗೆ ಗಾಯ
Update: 2021-03-25 18:46 IST
ಹೊಸದಿಲ್ಲಿ: ಶ್ರೀನಗರದ ಹೊರವಲಯ ಲಾವಾಯ್ ಪೊರಾದಲ್ಲಿ ಗುರುವಾರ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ ಓರ್ವ ಸಿಆರ್ ಪಿಎಫ್ ಅಧಿಕಾರಿ ಸಾವನ್ನಪ್ಪಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಾಳಿಯ ಹಿಂದೆ ಲಷ್ಕರೆ ತಯ್ಯಬ ಸಂಘಟನೆಯ ಕೈವಾಡವಿದೆ ಎಂದು ಕಾಶ್ಮೀರದ ಐಜಿ ವಿಜಯಕುಮಾರ್ ತಿಳಿಸಿದ್ದಾರೆ.
ಗಾಯಗೊಂಡಿದ್ದ ಯೋಧರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಗ್ರರ ದಾಳಿಯಲ್ಲಿ ಸಬ್ ಇನ್ಸ್ ಪೆಕ್ಟರ್ ತ್ರಿಪುರಾ ಮೂಲದ ಮಂಗಾರಾಮ್ ದೇವ್ ಬರ್ಮನ್ ಹುತಾತ್ಮರಾಗಿದ್ದಾರೆ. ಕಾನ್ ಸ್ಟೇಬಲ್ ನಝೀಮ್ ಅಲಿ, ಜಗನ್ನಾಥ್ ರೇ ಹಾಗೂ ಅಶೋಕ್ ಕುಮಾರ್ ಗಾಯಗೊಂಡಿದ್ದಾರೆ.