ಐವರು ಕಾರ್ಯಕರ್ತರನ್ನು ಕೇಂದ್ರ ಭದ್ರತಾ ಪಡೆ ಗುಂಡಿಟ್ಟು ಸಾಯಿಸಿದೆ: ತೃಣಮೂಲ ಕಾಂಗ್ರೆಸ್ ಆರೋಪ

Update: 2021-04-10 07:01 GMT

ಕೋಲ್ಕತಾ: ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ ಬಂಗಾಳದ ಕೂಚ್ ಬಿಹಾರದಲ್ಲಿ ತೃಣಮೂಲ ಕಾಂಗ್ರೆಸ್ ನ ಐವರು ಕಾರ್ಯಕರ್ತರನ್ನು ಗುಂಡಿಟ್ಟು ಸಾಯಿಸಲಾಗಿದೆ ಎಂದು ಟಿಎಂಸಿ ಆರೋಪಿಸಿದೆ.

ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಬಳಿಕ ಗುಂಡು ಹಾರಿಸಲಾಗಿದೆ. ಸಿಆರ್ ಪಿಎಫ್  ಪಡೆ ಗುಂಡು ಹಾರಿಸಿದೆ ಎಂದು ಆರೋಪಿಸಲಾಗಿದೆ.

ಚುನಾವಣಾ ಆಯೋಗವು ಘಟನೆಯ ಕುರಿತು ವರದಿ ಕೇಳಿದೆ.

ಚುನಾವಣಾ ಆಯೋಗವು ಸುಮಾರು 16,000 ಚುನಾವಣಾ ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಎ)ಯ ಸುಮಾರು 80,000 ಸಿಬ್ಬಂದಿಯನ್ನು ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News