×
Ad

"ಗಂಭೀರ ಕೋವಿಡ್‌ ಲಕ್ಷಣಗಳಿಲ್ಲದಿದ್ದರೂ ಕೆಲ ಸೆಲೆಬ್ರಿಟಿಗಳು ಆಸ್ಪತ್ರೆಯ ಬೆಡ್‌ ಗಳನ್ನು ಆಕ್ರಮಿಸಿಕೊಂಡಿದ್ದಾರೆ"

Update: 2021-04-13 18:22 IST
Photo: Facebook

ಮುಂಬೈ: ಗಂಭೀರವಾಗಿರುವ ಕೋವಿಡ್‌ ಲಕ್ಷಣಗಳು ಇಲ್ಲದೇ ಇದ್ದರೂ ಕೂಡಾ ಕೆಲವು ಬಾಲಿವುಡ್‌ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಆಸ್ಪತ್ರೆಯ ಹಾಸಿಗೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ಅಸ್ಲಂ ಶೇಖ್‌ ಹೇಳಿಕೆ ನೀಡಿದ್ದಾರೆ. ಈಗಾಗಲೇ ಕೋವಿಡ್‌ ನಿಂದ ಗಂಭೀರ ಸಮಸ್ಯೆಗೆ ಒಳಗಾಗಿರುವವರಿಗೆ ಆಸ್ಪತ್ರೆಗೆ ಪ್ರವೇಶ ನೀಡುತ್ತಿಲ್ಲ. ಆ ಬೆಡ್‌ ಗಳನ್ನು ಗಂಭೀರ ಸ್ಥಿತಿಯಲ್ಲಿರುವವರಿಗೆ ಬಳಸಬಹುದಿತ್ತು ಎಂದು ಅವರು ಹೇಳಿದರು.

"ಸಿನಿಮಾದ ಸಲೆಬ್ರಿಟಿಗಳು ಮತತ್ತು ಕೆಲ ಕ್ರಿಕೆಟಿಗರು ಸೌಮ್ಯ ರೂಪದ ಲಕ್ಷಣಗಳನ್ನು ಹೊಂದಿದ್ದರು ಅಥವಾ ಅವರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ ಅವರು ತಮ್ಮನ್ನು ಪ್ರಮುಖ ಆಸ್ಪತ್ರೆಗೆ ದಾಖಲಿಸಿಕೊಂಡರು ಮತ್ತು ದೀರ್ಘ ಕಾಲ ಹಾಸಿಗೆಯನ್ನು ಆಕ್ರಮಿಸಿಕೊಂಡರು" ಎಂದು ಅಸ್ಲಂ ಹೇಳಿದರು. 

ಸದ್ಯ ಮಹಾರಾಷ್ಟ್ರದಲ್ಲಿ 90,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ದೈನಂದಿನ 10,000ಕ್ಕೂ ಹೆಚ್ಚು ಪಾಸಿಟಿವ್‌ ವರದಿಗಳು ಕಂಡು ಬರುತ್ತಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News