ರಮಝಾನ್‌ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ

Update: 2021-04-13 15:37 GMT

ಹೊಸದಿಲ್ಲಿ: ಮಂಗಳವಾರದಿಂದ ಮುಸ್ಲಿಮರ ಪವಿತ್ರ ರಮಝಾನ್‌ ತಿಂಗಳು ಆರಂಭವಾಗಿದ್ದು, ಈ ಕುರಿತಾದಂತೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಸಲ್ಲಿಸಿದ್ದಾರೆ. "ಪವಿತ್ರ ರಮಝಾನ್‌ ಮಾಸದ ಶುಭಾಶಯಗಳು" ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

"ರಮಝಾನ್ ಬಡವರಿಗೆ‌ ಮತ್ತು ನಿರ್ಗತಿಕರಿಗೆ ಸೇವೆ ಸಲ್ಲಿಸುವ ಪ್ರಮುಖ ಸಂದೇಶವನ್ನು ಸಾರುತ್ತದೆ. ಇದು ಸಮಾನತೆ, ಸಹೋದರತೆ ಮತ್ತು ಸಹಾನುಭೂತಿಯ ಮಹತ್ವವನ್ನು ಪುನರುಚ್ಚರಿಸುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News