ಆಮ್ಲಜನಕದ ಕೊರತೆಯಿಂದಾಗಿ 12 ಕೋವಿಡ್ ರೋಗಿಗಳು ಮೃತ್ಯು

Update: 2021-04-18 07:17 GMT

ಭೋಪಾಲ್: ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಮಧ್ಯಪ್ರದೇಶದ ಶಹಡೋಲ್ ವೈದ್ಯಕೀಯ ಕಾಲೇಜಿನಲ್ಲಿ 12 ಮಂದಿ ಕೊರೋನವೈರಸ್ ರೋಗಿಗಳು ರವಿವಾರ ರಾತ್ರಿ ಸಾವನ್ನಪ್ಪಿದ್ದಾರೆ.

ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ -19 ರೋಗಿಗಳ ಸಾವು ಸಂಭವಿಸಿದೆ ಎಂದು ಶಹಡೋಲ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಮಿಲಿಂದ್ ಶಿರಾಲ್ಕರ್ ಮಾಧ್ಯಮಗಳಿಗೆ ತಿಳಿಸಿದರು.

ಸ್ಥಿರವಾದ ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿವೆ ಎಂದು ಮೃತ ಕೋವಿಡ್ -19 ರೋಗಿಗಳ ಕುಟುಂಬ ಸದಸ್ಯರು ಕೂಡ ಹೇಳಿದ್ದಾರೆ.

ಮತ್ತೊಂದೆಡೆ, ಶಹಡೋಲ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅರ್ಪಿತ್ ವರ್ಮಾ ಆಮ್ಲಜನಕದ ಕೊರತೆಗೂ,ಕೋವಿಡ್ ರೋಗಿಗಳ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸದ್ಯಕ್ಕೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಒದಗಿಸಲು ಮಾತ್ರ ಶಹಡೋಲ್ ವೈದ್ಯಕೀಯ ಕಾಲೇಜು ಸಜ್ಜುಗೊಂಡಿದೆ.

ದ್ರವಯುಕ್ತ ವೈದ್ಯಕೀಯ ಆಮ್ಲಜನಕದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರಕಾರದ ಪ್ರಯತ್ನಗಳ ಭಾಗವಾಗಿ ಮಧ್ಯಪ್ರದೇಶದಲ್ಲಿ ಕನಿಷ್ಠ ಐದು ಪಿಎಸ್‌ಎ (ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್) ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News