ದಿಲ್ಲಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಿ ನೆರವಿನ ಹಸ್ತ ನೀಡಲಿರುವ ಖಲ್ಸಾ ಏಡ್
Update: 2021-04-24 13:01 IST
ಹೊಸದಿಲ್ಲಿ: ಇಂಗ್ಲೆಂಡ್ ಮೂಲದ ಸಿಖ್ ಸಮಾಜಸೇವಾ ಸಂಸ್ಥೆ ಖಲ್ಸಾ ಏಡ್ ದಿಲ್ಲಿಯಲ್ಲಿ ಕೋವಿಡ್-19 ನಿರ್ವಹಣೆಗೆ ತನ್ನ ಪಾಲಿನ ಸಹಾಯ ಮಾಡಲು ನಿರ್ಧರಿಸಿದ್ದು ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಅಗತ್ಯ ರೋಗಿಗಳಿಗೆ ಒದಗಿಸಲಿದೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ದಿಲ್ಲಿ ತೀವ್ರ ಬಾಧಿತವಾಗಿರುವುದರಿಂದ ಅಲ್ಲಿ ಮೊದಲು ತನ್ನ ಸೇವೆ ಒದಗಿಸಲು ನಿರ್ಧರಿಸಿದೆ. ಈ ಕುರಿತು ಸಂಸ್ಥೆ ಟ್ವೀಟ್ ಕೂಡ ಮಾಡಿದೆ. ಮಾರುಕಟ್ಟೆಯಲ್ಲಿ ಒಂದು ಕಾನ್ಸಂಟ್ರೇಟರ್ ಬೆಲೆ ರೂ 60,000ಕ್ಕೂ ಹೆಚ್ಚಿದೆ.
ಕಳೆದ ನವೆಂಬರ್ ತಿಂಗಳಿನಿಂದ ಖಲ್ಸಾ ಏಡ್ ದಿಲ್ಲಿಯ ಗಡಿಗಳಲ್ಲಿ ಕೃಷಿ ಕಾಯಿದೆಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಅಗತ್ಯ ವಸ್ತುಗಳನ್ನು ಒದಗಿಸಿ ಸಹಾಯ ಮಾಡುತ್ತಿದೆ. ಮಾರ್ಚ್ ತಿಂಗಳಲ್ಲಿ ಸಂಘಟನೆಯ ಸ್ವಯಂಸೇವಕರು ಪ್ರತಿಭಟನೆ ಸ್ಥಳದಲ್ಲಿ ಏರ್ ಕೂಲರ್ ಅಳವಡಿಸಿದ್ದಾರಲ್ಲದೆ ನೀರು ಪೂರೈಕೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ ಹಾಗೂ ಸೊಳ್ಳೆ ನಿವಾರಕಗಳನ್ನು ಒದಗಿಸಿದ್ದಾರೆ