×
Ad

ಉತ್ತರಾಖಂಡದಲ್ಲಿ ಹಿಮನದಿ ಸ್ಪೋಟ: 8 ಮಂದಿ ಮೃತ್ಯು, 430 ಜನರ ರಕ್ಷಣೆ

Update: 2021-04-24 13:25 IST

ಹರಿದ್ವಾರ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಇಂಡೋ-ಚೀನಾ ಗಡಿಯ ಬಳಿ ಶುಕ್ರವಾರ ಹಿಮಪಾತ ಸಂಭವಿಸಿ ಕನಿಷ್ಠ 8 ಜನರು ಮೃತಪಟ್ಟಿದ್ದಾರೆ. ಸುಮ್ನಾ-ರಿಮ್ಖಿಮ್ ರಸ್ತೆಯಲ್ಲಿ ಹಿಮನದಿಯ ಒಂದುಭಾಗ ಕುಸಿದ ನಂತರ ಈ ಹಿಮಪಾತ ಸಂಭವಿಸಿದೆ. ಅಲ್ಲಿ ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.

ಭಾರತೀಯ ಸೇನೆಯು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿತು. 430 ಜನರನ್ನು ರಕ್ಷಿಸಲಾಗಿದೆ. ಹಿಮಪಾತ ಸ್ಥಳದಿಂದ ಈವರೆಗೆ ಎಂಟು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರು  ಜನರಿಗೆ ಗಂಭೀರ ಗಾಯವಾಗಿದ್ದು, ಅವರಿಗೆ ಸೇನಾ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜೋಶಿ ಮಠದ ಬಾರ್ಡರ್ ರೋಡ್ಸ್ ತಂಡಗಳು ಭಪ್ಕುಂಡಿಯಿಂದ ಸುಮ್ನಾವರೆಗಿನ ಪ್ರದೇಶವನ್ನು ತೆರವುಗೊಳಿಸಿವೆ. ಈ ಪ್ರದೇಶದಲ್ಲಿ ಕಳೆದ 5 ದಿನಗಳಿಂದ ಭಾರೀ ಮಳೆ ಹಾಗೂ ಹಿಮಪಾತ ಕಂಡುಬರುತ್ತಿದೆ.

ಭಾರತೀಯ ಸೇನೆಯು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ..ಎರಡೂ ಶಿಬಿರದಲ್ಲಿ ಇತರ ಕಾರ್ಮಿಕರನ್ನು ಪತ್ತೆ ಹಚ್ಚಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News