×
Ad

ಉತ್ತರ ಪ್ರದೇಶ: ​ಕೋವಿಡ್-19ಗೆ ಇಬ್ಬರು ಬಿಜೆಪಿ ಶಾಸಕರು ಮೃತ್ಯು

Update: 2021-04-24 14:37 IST

ಲಕ್ನೊ: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಇಬ್ಬರು ಶಾಸಕರು ಕೋವಿಡ್-19ನಿಂದಾಗಿ ಮೃತಪಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ಶುಕ್ರವಾರ ತಿಳಿಸಿವೆ.

ಲಕ್ನೊ ಪಶ್ಚಿಮದ ಶಾಸಕ ಸುರೇಶ್ ಕುಮಾರ್ ಶ್ರೀವಾಸ್ತವ(76ವರ್ಷ),ಔರೈಯಾ ಸದರ್ ಶಾಸಕ ರಮೇಶ್ಚಂದ್ರ ದಿವಾಕರ್ (56)ಕೊರೋನ ವೈರಸ್ ನಿಂದಾಗಿ  ಲಕ್ನೊ ಹಾಗೂ ಮೀರತ್ ನಲ್ಲಿ ಮೃತಪಟ್ಟಿದ್ದಾರೆ.

ಶ್ರೀವಾಸ್ತವ ಅವರು ಲಕ್ನೊದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೆ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಲಕ್ನೊ ಸಂಸದರಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶ್ರೀವಾಸ್ತವ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ದಿವಾಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ ದಿವಾಕರ್ ಅವರ ಪತ್ನಿಗೂ ಕೋವಿಡ್-19 ಸೋಂಕು ತಗಲಿದ್ದು, ಕಾನ್ಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News