"ಇಲ್ಲಿಯವರೆಗೆ ಶಾಸಕರನ್ನು ಖರೀದಿ ಮಾಡಲು ಹಣವನ್ನಿಟ್ಟುಕೊಂಡು ಕುಳಿತಿದ್ದಿರಾ?"
Update: 2021-04-25 19:36 IST
ಹೊಸದಿಲ್ಲಿ: ದೇಶದ ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್ ನಿರ್ಮಾಣ ಪ್ಲಾಂಟ್ ಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹೇಳಿಕೆ ನೀಡಿದ್ದ ಬೆನ್ನಲ್ಲಿಯೇ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಟ್ವಿಟರ್ ನಲ್ಲಿ ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಲು ಪ್ರಾರಂಭಿಸಿದ್ದರು. ಪಿಎಂ ಕೇರ್ ಫಂಡ್ ನಿಂದ ಇದುವರೆಗೂ ಯಾವುದೇ ಹಣ ಬಿಡುಗಡೆ ಮಾಡದೇ, ಸದ್ಯ ಆಕ್ಸಿಜನ್ ಸಂಪೂರ್ಣ ಖಾಲಿಯಾದ ಬಳಿಕ ನಿರ್ಮಾಣ ಘಟಕಗಳ ಸ್ಥಾಪನೆಗೆ ಹಣ ಮಂಜೂರು ಮಾಡಿದ ಕುರಿತು ಕಾಮಿಡಿಯನ್ ಅಭಿಜಿತ್ ಗಂಗೂಲಿ ಕಿಡಿಕಾರಿದ್ದಾರೆ. "ಇಷ್ಟು ಬೇಗ ಯಾಕೆ? ಇನ್ನೂ ಒಂದು ವರ್ಷ ಕಳೆದ ಬಳಿಕ ಹಣ ಮಂಜೂರು ಮಾಡಬಹುದಿತ್ತಲ್ವಾ? ಎಂದು ಶೀರ್ಷಿಕೆಯಲ್ಲೇ ವ್ಯಂಗ್ಯವಾಡಿದ್ದಾರೆ.
ಅವರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ ವೀಡಿಯೋ ಹೀಗಿದೆ.