×
Ad

ನಾಲ್ವರು ಕೋವಿಡ್ -19 ರೋಗಿಗಳು ಮೃತ್ಯು: ಜೈಪುರ ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರ ದಾಂಧಲೆ

Update: 2021-04-28 18:39 IST

ಜೈಪುರ:  ನಗರದ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಕೋವಿಡ್ -19 ರೋಗಿಗಳು ಸಾವನ್ನಪ್ಪಿದ್ದು, ಆಕ್ಸಿಜನ್ ಸಿಲಿಂಡರ್ ಗಳನ್ನು ಬದಲಾಯಿಸಲು ಯಾವುದೇ ಸಿಬ್ಬಂದಿ ಇಲ್ಲ ಎಂದು ಆರೋಪಿಸಿ ಅವರ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆಮ್ಲಜನಕ ಲಭ್ಯವಿದ್ದರೂ ಆಸ್ಪತ್ರೆಯಲ್ಲಿ ಸಿಲಿಂಡರ್‌ಗಳನ್ನು ಬದಲಾಯಿಸಲು ಯಾವುದೇ ಸಿಬ್ಬಂದಿ ಲಭ್ಯವಿಲ್ಲ ಎಂದು ಕಲ್ವಾರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಗುರುದತ್ ಸೈನಿ ತಿಳಿಸಿದ್ದಾರೆ.

"ಆಸ್ಪತ್ರೆಯಲ್ಲಿ ನಾಲ್ವರು ಕೋವಿಡ್ ರೋಗಿಗಳು ಮಂಗಳವಾರ ರಾತ್ರಿ ಸಾವನ್ನಪ್ಪಿದರು. ಅವರ ಕುಟುಂಬ ಸದಸ್ಯರು ಜಮಾಯಿಸಿ  ಆಮ್ಲಜನಕ ಸಿಲಿಂಡರ್ ಗಳನ್ನು  ಬದಲಾಯಿಸಲು ಯಾವುದೇ ಸಿಬ್ಬಂದಿ ಇರಲಿಲ್ಲ. ಇದು ಸಾವಿಗೆ ಕಾರಣವಾಯಿತು''  ಎಂದು ಆರೋಪಿಸಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News