ಕೋವಿಡ್-19:ದೇಶದಲ್ಲಿ 3.26 ಲಕ್ಷ ಹೊಸ ಪ್ರಕರಣಗಳು, 3,000ಕ್ಕೂ ಅಧಿಕ ಸಾವುಗಳು

Update: 2021-05-15 15:00 GMT

ಹೊಸದಿಲ್ಲಿ,ಮೇ 15: ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 3,26,098 ಕೊರೋನವೈರಸ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 2,43,72,907ಕ್ಕೇರಿದೆ. ಇದೇ ಅವಧಿಯಲ್ಲಿ 3,890 ಜನರು ಸಾವನ್ನಪ್ಪಿದ್ದು,ಒಟ್ಟು ಸಾವುಗಳ ಸಂಖ್ಯೆ 2,66,207ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 36,73,802ಕ್ಕೆ ಇಳಿಕೆಯಾಗಿದ್ದು, ಒಟ್ಟು ಸೋಂಕು ಪ್ರಕರಣಗಳ ಶೇ.15.07ರಷ್ಟಿದೆ. ಇದೇ ವೇಳೆ ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರವು ಶೇ.83.83ಕ್ಕೇರಿದೆ ಎಂದು ಅದು ಹೇಳಿದೆ.
ಸೋಂಕಿನಿಂದ ಗುಣಮುಖರಾಗಿರುವವರ ಸಂಖ್ಯೆ 2,04,32,898ಕ್ಕೆ ಏರಿದ್ದು,ಮರಣ ದರವು ಶೇ.1.09ರಷ್ಟಿದೆ.
ಮೇ 14ರವರೆಗೆ 31,30,17,193 ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು,ಶುಕ್ರವಾರ ಒಂದೇ ದಿನ 6,93,093 ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಸಂಭವಿಸಿದ 3,890 ಸಾವುಗಳ ಪೈಕಿ 695 ಸಾವುಗಳೊಂದಿಗೆ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ(373),ಉತ್ತರ ಪ್ರದೇಶ (311),ದಿಲ್ಲಿ (289), ತಮಿಳುನಾಡು (288),ಉತ್ತರಾಖಂಡ (181),ಪಂಜಾಬ್ (180),ಛತ್ತೀಸ್ಗಡ (172),ಹರ್ಯಾಣ (164),ರಾಜಸ್ಥಾನ (155),ಪಶ್ಚಿಮ ಬಂಗಾಳ (136) ಮತ್ತು ಗುಜರಾತ್ (104) ನಂತರದ ಸ್ಥಾನಗಳಲ್ಲಿವೆ.

ಮಹಾರಾಷ್ಟ್ರದಲ್ಲಿ 79,552,ಕರ್ನಾಟಕದಲ್ಲಿ 21,085,ದಿಲ್ಲಿಯಲ್ಲಿ 20,907,ತಮಿಳುನಾಡಿನಲ್ಲಿ 17,056,ಉತ್ತರ ಪ್ರದೇಶದಲ್ಲಿ 16,957,ಪ.ಬಂಗಾಳದಲ್ಲಿ 12,993,ಪಂಜಾಬಿನಲ್ಲಿ 11,477 ಮತ್ತು ಛತ್ತೀಸ್ಗಡದಲ್ಲಿ 11,461 ಸೇರಿದಂತೆ ದೇಶದಲ್ಲಿ ಈವರೆಗೆ ಒಟ್ಟು 2,66,207 ಸಾವುಗಳು ಸಂಭವಿಸಿವೆ.
ಶೇ.70 ಸಾವುಗಳು ಸಹಕಾಯಿಲೆಗಳಿಂದ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯವು ಒತ್ತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News