ದಿಲ್ಲಿ: ಸೋಂಕಿತರ ಮನೆಗೇ ಆಮ್ಲಜನಕ ಪೂರೈಕೆ; ಸಿಎಂ ಕೇಜ್ರಿವಾಲ್ ಘೋಷಣೆ

Update: 2021-05-15 16:13 GMT

ಹೊಸದಿಲ್ಲಿ, ಮೇ 15: ಮನೆಯಲ್ಲಿಯೇ ಐಸೋಲೇಷನ್(ಪ್ರತ್ಯೇಕವಾಗಿರುವ)ನಲ್ಲಿರುವ ಕೊರೋನ ಸೋಂಕಿತರಿಗೆ ಮನೆ ಬಾಗಿಲಿಗೇ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲಾಗುವುದು. ಅಲ್ಲದೆ ಪ್ರತೀ ಜಿಲ್ಲೆಯಲ್ಲೂ ಆಮ್ಲಜನಕ ಸಾಂದ್ರಕಗಳ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಶನಿವಾರ ಘೋಷಿಸಿದ್ದಾರೆ.

ಮನೆಯಲ್ಲಿ ಪ್ರತ್ಯೇಕವಾಗಿರುವ ಸೋಂಕಿತರಿಗೆ ಆಮ್ಲಜನಕದ ಅಗತ್ಯವಿದ್ದರೆ ಎರಡು ಗಂಟೆಯೊಳಗೆ ತಲುಪಿಸಲಾಗುವುದು. ಮನೆಗೆ ಆಮ್ಲಜನಕ ಪೂರೈಸುವ ತಂಡದೊಂದಿಗೆ ಇರುವ ಟೆಕ್ನೀಶಿಯನ್ ಆಮ್ಲಜನಕ ಸಾಂದ್ರಕಗಳನ್ನು ಬಳಸುವ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಲಿದ್ದಾರೆ ಎಂದವರು ಹೇಳಿದ್ದಾರೆ.

ಕೊರೋನ ಸೋಂಕಿನಿಂದ ಚೇತರಿಸಿಕೊಂಡಿದ್ದರೂ ವೈದ್ಯರ ಸಲಹೆಯಂತೆ ಆಮ್ಲಜನಕದ ಅಗತ್ಯ ಇರುವವರಿಗೆ ಮನೆಗೇ ಆಮ್ಲಜನಕ ಪೂರೈಸಲಾಗುವುದು. ಅಗತ್ಯವಿರುವವರು 1031 ಸಂಖ್ಯೆಗೆ ಕರೆ ಮಾಡಿದರೆ ಆಮ್ಲಜನಕ ಒದಗಿಸಲಾಗುವುದು. ಆದರೆ ಅವರಿಗೆ ಆಮ್ಲಜನಕದ ಅಗತ್ಯವಿದೆ ಎಂದು ನಮ್ಮ ವೈದ್ಯರ ತಂಡ ದೃಢಪಡಿಸಿದರೆ ಮಾತ್ರ ಆಮ್ಲಜನಕ ಒದಗಿಸಲಾಗುವುದು. ರೋಗಿ ಚೇತರಿಸಿಕೊಂಡ ಬಳಿಕ ಸಾಂದ್ರಕಗಳನ್ನು ಹಿಂಪಡೆದು ಸ್ಯಾನಿಟೈಸ್ ಮಾಡಿ ಮರುಬಳಸಲಾಗುವುದು ಎಂದ ಕೇಜ್ರೀವಾಲ್, ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News