×
Ad

ಭಾರತದ ಮೊದಲ ಎಂಎಂಎ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಅರ್ಜನ್ ಸಿಂಗ್ ಭುಲ್ಲರ್

Update: 2021-05-16 13:44 IST
photo: yutube

ಹೊಸದಿಲ್ಲಿ: ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)ನಲ್ಲಿ ಶನಿವಾರ ಅರ್ಜನ್ ಸಿಂಗ್ ಭುಲ್ಲರ್ ಇತಿಹಾಸ ನಿರ್ಮಿಸಿದರು.  ಹೆವಿ ವೇಯ್ಟ್ ವಿಶ್ವ ಚಾಂಪಿಯನ್ ಆಗಿ ಕಳೆದ ಐದೂವರೆ ವರ್ಷಗಳಿಂದ ಪ್ರಾಬಲ್ಯ ಸಾಧಿಸಿದ್ದ  ಫಿಲಿಪಿನೋ-ಅಮೆರಿಕನ್ ಫೈಟರ್ ಬ್ರೆಂಡನ್ ವೆರಾ ಅವರನ್ನು ಸಿಂಗಾಪುರದ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಹೋರಾಟದಲ್ಲಿ ಸೋಲಿಸಿದ ಭುಲ್ಲರ್  ಎಂಎಂಎ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಮೊದಲ ಫೈಟರ್ ಎನಿಸಿಕೊಂಡರು.

ಭುಲ್ಲರ್ ಅವರು ವೆರಾ ವಿರುದ್ಧ ಎರಡನೇ ಸುತ್ತಿನಲ್ಲಿ ಟೆಕ್ನಿಕಲ್ ನಾಕೌಟ್ (ಟಿಕೆಒ)ಮೂಲಕ  ಗೆಲುವು ಸಾಧಿಸಿದರು.  ಈ ಫಲಿತಾಂಶದೊಂದಿಗೆ ಇಂಡೋ-ಕೆನಡಿಯನ್ ಫೈಟರ್ ಅರ್ಜನ್ ಸಿಂಗ್ ಭುಲ್ಲರ್ ಎಂಎಂಎ ವೃತ್ತಿಪರ ದಾಖಲೆಯನ್ನು 11-1ಕ್ಕೆ ವಿಸ್ತರಿಸಿದರು.

2015ರ ಡಿಸೆಂಬರ್ ನಿಂದ ಹೇವಿವೇಯ್ಟ್ ವಿಶ್ವ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದ ವೆರಾ ವೃತ್ತಿಜೀವನದಲ್ಲಿ ಕೇವಲ ನಾಲ್ಕನೇ ಸೋಲು ಕಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News