×
Ad

ಕೋವಿಡ್ ಎರಡನೇ ಅಲೆ ಜುಲೈನಲ್ಲಿ ಕೊನೆಗೊಳ್ಳುತ್ತದೆ: ವಿಜ್ಞಾನಿಗಳ ಸಮಿತಿ

Update: 2021-05-19 23:20 IST

ಹೊಸದಿಲ್ಲಿ: ಭಾರತದ  ಕೋವಿಡ್ -19 ಎರಡನೇ ಅಲೆಯು ಈ ವರ್ಷದ ಜುಲೈ ವೇಳೆಗೆ ಕುಸಿಯುವ ನಿರೀಕ್ಷೆಯಿದೆ. ಸಾಂಕ್ರಾಮಿಕ ರೋಗದ ಮೂರನೇ ಅಲೆಯು  ಸುಮಾರು ಆರರಿಂದ ಎಂಟು ತಿಂಗಳಲ್ಲಿ ನಿರೀಕ್ಷಿಸಲಾಗಿದೆ ಎಂದು  ಭಾರತ ಸರಕಾರದ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಸ್ಥಾಪಿಸಿದ ವಿಜ್ಞಾನಿಗಳ ಮೂವರು ಸದಸ್ಯರ ಸಮಿತಿಯು ಆಶಾವಾದ ವ್ಯಕ್ತಪಡಿಸಿದೆ.

ಸೂತ್ರಾ ಮಾದರಿಯನ್ನು ಬಳಸಿಕೊಂಡು, ವಿಜ್ಞಾನಿಗಳು ಮೇ ಅಂತ್ಯದಲ್ಲಿ ದಿನಕ್ಕೆ ಸುಮಾರು 1.5 ಲಕ್ಷ ಪ್ರಕರಣಗಳನ್ನು ಹಾಗೂ  ಜೂನ್ ಅಂತ್ಯವು ಪ್ರತಿದಿನ 20,000 ಪ್ರಕರಣಗಳಿಗೆ ಸಾಕ್ಷಿಯಾಗಲಿದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

"ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಜಾರ್ಖಂಡ್, ರಾಜಸ್ಥಾನ, ಕೇರಳ, ಸಿಕ್ಕಿಂ, ಉತ್ತರಾಖಂಡ, ಗುಜರಾತ್, ಹರಿಯಾಣ, ದಿಲ್ಲಿ, ಗೋವಾ ಮುಂತಾದ ರಾಜ್ಯಗಳು ಈಗಾಗಲೇ ಉತ್ತುಂಗಕ್ಕೇರಿವೆ" ಎಂದು ಸಮಿತಿಯ ಸದಸ್ಯ ಐಐಟಿ ಕಾನ್ಪುರದ ಪ್ರೊಫೆಸರ್ ಮನೀಂದ್ರ ಅಗರ್ವಾಲ್ ಹೇಳಿದರು. 

ಸೂತ್ರಾ ಮಾದರಿಯ ಪ್ರಕಾರ, ಆರರಿಂದ ಎಂಟು ತಿಂಗಳಲ್ಲಿ ಮೂರನೇ ಅಲೆಯನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News