ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳ ಬಿಡುಗಡೆಗೆ ರಾಷ್ಟ್ರಪತಿಗೆ ಸ್ಟಾಲಿನ್ ಪತ್ರ, ಕಾಂಗ್ರೆಸ್ ಅಸಮಾಧಾನ

Update: 2021-05-22 09:29 GMT

ಚೆನ್ನೈ: ಮಾಜಿ ಪ್ರಧಾನಿ  ರಾಜೀವ್ ಗಾಂಧಿಯವರ ಹತ್ಯೆಯ ಏಳು ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ಕೋರಿ  ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.  ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಎಂದೂ ವಿರೋಧಿಸದ  ಕಾಂಗ್ರೆಸ್ ಸ್ಟಾಲಿನ್ ಅವರ ನಿರ್ಧಾರದಿಂದ ಅಸಮಾಧಾನಗೊಂಡಿದೆ.

ಕಾನೂನು ಮೂಲಕ ನಿರ್ಧರಿಸಬೇಕಾದ ವಿಷಯದ ಮೇಲೆ  ಒತ್ತಡ  ಹೇರುವುದು ಸೂಕ್ತವಲ್ಲ ಎಂದು ತಮಿಳುನಾಡು ಪ್ರದೇಶ ಕಾಂಗ್ರೆಸ್  ಅಧ್ಯಕ್ಷ ಕೆ .ಎಸ್. ಅಳಗಿರಿ ಶುಕ್ರವಾರ ಹೇಳಿದ್ದಾರೆ.

. "ಏಳು ಅಪರಾಧಿಗಳ ಬಿಡುಗಡೆಗಾಗಿ ಸಿಎಂ ಸ್ಟಾಲಿನ್ ಅವರು ರಾಷ್ಟ್ರಪತಿಗೆ ಬರೆದ ಪತ್ರವು ನಮಗೆ ಸ್ವೀಕಾರಾರ್ಹವಾಗಿಲ್ಲ”ಅಳಗಿರಿ ಹೇಳಿದರು.

“ಅಪರಾಧಿಯನ್ನು ಬಿಡುಗಡೆ ಮಾಡಬೇಕಾದರೆ, ಇದನ್ನು ನ್ಯಾಯಾಲಯವು ತೀರ್ಮಾನಿಸಬೇಕು. ಅನಗತ್ಯ ರಾಜಕೀಯ ಮೂಲಕ ಹಾಗೆ ಮಾಡಬಾರದು ಎಂಬುದು ಕಾಂಗ್ರೆಸ್‌ನ ನಿಲುವು.  ಅನಗತ್ಯ ರಾಜಕೀಯ ಒತ್ತಡವು ಕಾನೂನು ಹಾಗೂ  ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟು ಮಾಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸಬಹುದು ”ಎಂದು ಅಳಗಿರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು,

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 30 ನೇ ಪುಣ್ಯತಿಥಿ ಯಂದು  ಟಿಎನ್‌ಸಿಸಿ ಕೇಂದ್ರ ಕಚೇರಿಯಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್  ಅವರಿಗೆ ಏಳು ಅಪರಾಧಿಗಳನ್ನು ತಕ್ಷಣ ಬಿಡುಗಡೆ ಮಾಡುವ ಬಗ್ಗೆ ಪತ್ರ ಬರೆದಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಅಳಗಿರಿ ಪ್ರತಿಕ್ರಿಯಿಸಿದರು.

 ಹತ್ಯೆ  ಪ್ರಕರಣದಲ್ಲಿ 26 ಜನರು ಶಿಕ್ಷೆಗೊಳಗಾಗಿದ್ದಾರೆ, ಅವರಲ್ಲಿ 19 ಜನರನ್ನು ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಳಗಿರಿ ಹೇಳಿದರು.

 “ನಾವು ಅದನ್ನು ವಿರೋಧಿಸಲಿಲ್ಲ. ನಾವು ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಿದ್ದೇವೆ ಹಾಗೂ  ಯಾವುದೇ ಕಾಂಗ್ರೆಸ್ಸಿಗರು ಇದನ್ನು ವಿರೋಧಿಸಲಿಲ್ಲ. ನಮ್ಮ ವಿಧಾನವು ಹಾಗೇ ಉಳಿದಿದೆ ”ಎಂದು ಅವರು ಹೇಳಿದರು.

"ತಮಿಳುನಾಡುನಾದ್ಯಂತ ಜೈಲುಗಳಲ್ಲಿ 25 ವರ್ಷಗಳಿಗಿಂತ ಹೆಚ್ಚು ಸಮಯದಿಂದ 100 ಕ್ಕೂ ಹೆಚ್ಚು ಅಪರಾಧಿಗಳು ಇದ್ದಾರೆ. ಇಷ್ಟು ವರ್ಷಗಳ ಕಾಲ ಜೈಲಿನಲ್ಲಿದ್ದ ಕಾರಣ ತಮಿಳರನ್ನು ಬಿಡುಗಡೆ ಮಾಡಬೇಕಾದರೆ, ಎಲ್ಲರನ್ನೂ ಬಿಡುಗಡೆ ಮಾಡಬೇಕಾಗುತ್ತದೆ. ಈ ಏಳು ಮಂದಿ ಮಾತ್ರ ಏಕೆ ಬಿಡುಗಡೆ ಮಾಡಬೇಕು.  ಇದೊಂದು  ಭಾವನಾತ್ಮಕ ವಿಷಯ'' ಎಂದು ಅಳಗಿರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News