ಉತ್ತರ ಒಡಿಶಾ, ಬಂಗಾಳದಲ್ಲಿ ಯಾಸ್ ಚಂಡಮಾರುತದ ಆರ್ಭಟ ಆರಂಭ

Update: 2021-05-26 06:53 GMT
Photo source: Twitter/@ANI

ಹೊಸದಿಲ್ಲಿ:  ಯಾಸ್ ಚಂಡಮಾರುತವು ಮುಂದಿನ ಮೂರು ಗಂಟೆಗಳಲ್ಲಿ ಕೋಲ್ಕತ್ತಾದಿಂದ 150 ಕಿ.ಮೀ ದೂರದಲ್ಲಿರುವ ಒಡಿಶಾದ ಧಮ್ರಾ ಹಾಗೂ  ಬಾಲಸೋರ್ ನಡುವೆ ಕರಾವಳಿಯನ್ನು ದಾಟಲಿದ್ದು, ಗಂಟೆಗೆ 140 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.  ಮಧ್ಯಾಹ್ನ ಹೊತ್ತಿಗೆ ಗಾಳಿ ವೇಗ ಮತ್ತಷ್ಟು ತೀವ್ರವಾಗಲಿದ್ದು, ಗಂಟೆಗೆ 155 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಐಎಂಡಿ ಭುವನೇಶ್ವರದ ಹಿರಿಯ ವಿಜ್ಞಾನಿ ಉಮಾಶಂಕರ್ ಹೇಳಿದ್ದಾರೆ.

ಯಾಸ್ ಚಂಡಮಾರುತದಿಂದಾಗಿ  ಭೂಕುಸಿತ ಆರಂಭವಾಗಿದೆ  ಎಂದು ಭಾರತ ಹವಾಮಾನ ಇಲಾಖೆ ಬೆಳಿಗ್ಗೆ 9 ಗಂಟೆಗೆ ತಿಳಿಸಿದೆ.

ಬಂಗಾಳದ ಕೆಲವು ಭಾಗಗಳಲ್ಲಿ ಜನರು ಮೊಣಕಾಲು ತನಕದ ನೀರಿನಲ್ಲಿ ನಡೆದಾಡುತ್ತಿರುವುದು ಕಂಡುಬಂದಿದೆ. ಪೂರ್ವ ಮೆದಿನಿಪುರದ ಕರಾವಳಿಯಲ್ಲಿ ಪ್ರಬಲ ಅಲೆಗಳು ಎದ್ದಿವೆ ಎಂದು ವರದಿಯಾಗಿದೆ.

ಚಂಡಮಾರುತದಿಂದ ಒಡಿಶಾದ ಜಗತ್ ಸಿಂಗ್‌ಪುರ, ಕೇಂದ್ರಪಾರ, ಭದ್ರಾಕ್ ಹಾಗೂ  ಬಾಲಸೋರ್ ಜಿಲ್ಲೆಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಬಂಗಾಳದ ಪಶ್ಚಿಮ ಮಿಡ್ನಾಪುರ, ಉತ್ತರ ಹಾಗೂ  ದಕ್ಷಿಣ 24 ಪರಗಣ ಜಿಲ್ಲೆಗಳು  ಹಾಗೂ  ಕೋಲ್ಕತಾ ದಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯಿಂದಾಗಿ ಬಿರುಗಾಳಿಯ ವಾತಾವರಣ ಸೃಷ್ಟಿಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News