ರೆಮ್ಡೆಸಿವಿರ್ ಉತ್ಪಾದನೆ 10 ಪಟ್ಟು ಹೆಚ್ಚಳ: ಸರಕಾರ
ಹೊಸದಿಲ್ಲಿ, ಮೇ 29: ಕೊರೋನ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್ಡೆಸಿವಿರ್ನ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಸಹಾಯಕ ಸಚಿವ ಮನ್ಸುಖ್ ಮಾಂಡವೀಯ ಶನಿವಾರ ಹೇಳಿದ್ದಾರೆ. ಈ ಉಪಯು್ತ ಔಷಧದ ಬೇಡಿಕೆಗಿಂತ ಪೂರೈಕೆ ಹೆಚಿ್ಚರುವುದರಿಂದ, ರೆಮ್ಡೆಸಿವಿರ್ ಔಷಧವನ್ನು ಕೇಂದ್ರದ ಮೂಲಕ ರಾಜ್ಯಕ್ಕೆ ಹಂಚಿಕೆ ಮಾಡುವ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದವರು ಹೇಳಿದ್ದಾರೆ.
221ರ ಎಪ್ರಿಲ್ 11ರಂದು ದೇಶದಲ್ಲಿ ದಿನಾ 33,000 ಶೀಶೆ ರೆಮ್ಡೆಸಿವಿರ್ ಉತ್ಪಾದನೆಯಾಗುತ್ತಿದ್ದರೆ ಪ್ರಧಾನಿ ಮೋದಿಯವರ ಚತುರ ನಾಯಕತ್ವದಿಂದ ಈಗ ದಿನಾ 3,50,000ಕ್ಕೆ ತಲುಪಿದೆ ಎಂದು ತಿಳಿಸಲು ಖುಷಿಯಾಗುತ್ತಿದೆ ಎಂದು ಮಾಂಡವೀಯ ಟ್ವೀಟ್ ಮಾಡಿದ್ದಾರೆ.
ರೆಮ್ಡೆಸಿವಿರ್ ಉತ್ಪಾದಿಸುವ ಘಟಕಗಳನ್ನು ಒಂದು ತಿಂಗಳೊಳಗೆ 20ರಿಂದ 60ಕ್ಕೆ ಹೆಚ್ಚಿಸಲಾಗಿದೆ. ತುರ್ತು ಬಳಕೆಗೆ 50 ಲಕ್ಷ ಶೀಶೆ ರೆಮ್ಡೆಸಿವರ್ ಔಷಧವನ್ನು ದಾಸ್ತಾನು ಇರಿಸಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ. ದೇಶದಲ್ಲಿ ರೆಮ್ಡೆಸಿವಿರ್ ನ ನಿರಂತರ ಲಭ್ಯತೆ ಖಾತರಿಪಡಿಸಲು ನಿಗಾ ವಹಿಸುವಂತೆ ರಾಷ್ಟ್ರೀಯ ಔಷಧ ದರ ನಿಗದಿ ಮಂಡಳಿ ಹಾಗೂ ಸಿಡಿಎಸ್ಸಿಒಗೆ ಸೂಚಿಸಲಾಗಿದೆ.
ಪೂರೈಕೆಗೆ ಉತ್ತೇಜನ ನೀಡಲು ಮತ್ತು ಬೆಲೆ ಕಡಿಮೆಗೊಳಿಸಲು ರೆಮ್ಡೆಸಿವಿರ್, ಈ ಲಸಿಕೆಂು ಕಚ್ಛಾ ವಸ್ತು ಹಾಗೂ ಇತರ ಪೂರಕ ಸಾಮಾಗ್ರಿಗಳ ಮೇಲಿನ ಮೇಲಿನ ಅಬಕಾರಿ ತೆರಿಗೆ ಮನ್ನಾ ಮಾಡಲಾಗಿದೆ ಎಂದವರು ಹೇಳಿದ್ದಾರೆ. ರೆಮ್ಡೆಸಿವಿರ್ ಲಸಿಕೆ ರಫ್ತು ಮಾಡುವುದನ್ನು ಎಪ್ರಿಲ್ 11ರಂದು ಕೇಂದ್ರ ಸರಕಾರ ನಿಷೇಧಿಸಿದೆ.