×
Ad

ರಾಜಸ್ಥಾನದಲ್ಲಿ ಶತಕ ತಲುಪಿದ ಡೀಸೆಲ್ ಬೆಲೆ

Update: 2021-06-12 13:53 IST

ಹೊಸದಿಲ್ಲಿ: ಇಂಧನ ದರದಲ್ಲಿ ಮತ್ತೊಮ್ಮೆ ಏರಿಕೆಯಾದ ನಂತರ ಡೀಸೆಲ್ ಬೆಲೆ ಇಂದು ರಾಜಸ್ಥಾನದಲ್ಲಿ ಲೀಟರ್‌ ಗೆ  100 ರೂ.ಅನ್ನು ದಾಟಿದೆ, ಇದೇ ವೇಳೆ ಕರ್ನಾಟಕ  ಪೆಟ್ರೋಲ್ ಬೆಲೆ ಲೀಟರ್ ಗೆ  ರೂ. 100 ದಾಖಲಿಸಿದ 7 ನೇ ರಾಜ್ಯ ಎನಿಸಿಕೊಂಡಿದೆ.

ಸರಕಾರಿ ಸ್ವಾಮ್ಯದ ತೈಲ ಕಂಪೆನಿಯ ಬೆಲೆ ಅಧಿಸೂಚನೆಯ ಪ್ರಕಾರ ಶನಿವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 27 ಪೈಸೆ ಹಾಗೂ  ಡೀಸೆಲ್ ಅನ್ನು ಲೀಟರ್ ಗೆ 23 ಪೈಸೆ ಹೆಚ್ಚಿಸಲಾಗಿದೆ.

ಮೇ 4 ರಿಂದ 23 ನೇ ಬಾರಿ ದೇಶಾದ್ಯಂತ ಇಂಧನ ಬೆಲೆ ಹೊಸ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಭಾರತ-ಪಾಕಿಸ್ತಾನ ಗಡಿ ಸಮೀಪವಿರುವ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಫೆಬ್ರವರಿಯಲ್ಲಿ ಮೊದಲ ಬಾರಿ ಪೆಟ್ರೋಲ್ ಲೀಟರ್ ರೂ.  100 ದಾಖಲಿಸಿತ್ತು.  ಇದೇ ಜಿಲ್ಲೆಯಲ್ಲಿ  ಶನಿವಾರ ಡೀಸೆಲ್ 100 ರ ಗಡಿ ದಾಟಿದೆ.

ಶ್ರೀ ಗಂಗಾ ನಗರದಲ್ಲಿ ಪೆಟ್ರೋಲ್ ಅನ್ನು 107.22 ರೂ.ಗೆ ಹಾಗೂ ಡೀಸೆಲ್ ಅನ್ನು 100.05 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ  ಲಡಾಖ್  ಆರು ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 100 ಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಇದೀಗ ಈ ಎಲ್ಲ ರಾಜ್ಯಗಳ ಪಟ್ಟಿಗೆ ಕರ್ನಾಟಕ ಕೂಡ ಸೇರ್ಪಡೆಗೊಂಡಿದೆ.

ಬೀದರ್, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಅನೇಕ ಸ್ಥಳಗಳಲ್ಲಿ ಪೆಟ್ರೋಲ್ ಲೀಟರ್ ಗೆ 100 ರೂ. ಗಡಿ ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News