×
Ad

ವಿಕಸನಗೊಳ್ಳುತ್ತಿರುವ ನ್ಯಾಯಾಂಗ ವ್ಯವಸ್ಥೆ ಕುರಿತು ಪುಸ್ತಕವನ್ನು ಬಿಡುಗಡೆಗೊಳಿಸಿದ ಸಿಜೆಐ

Update: 2021-06-26 22:32 IST

ಹೊಸದಿಲ್ಲಿ,ಜೂ.26: ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಆರ್.ವಿ.ರವೀಂದ್ರನ್ ಅವರು ಬರೆದಿರುವ ‘ಕಾನೂನು ಮತ್ತು ನ್ಯಾಯದಲ್ಲಿ ವೈಪರೀತ್ಯಗಳು ’ಎಂಬ ಕೃತಿಯನ್ನು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ಎನ್.ವಿ.ರಮಣ ಅವರು ಶನಿವಾರ ಬಿಡುಗಡೆಗೊಳಿಸಿದರು. ಕೃತಿಯು ನಿವಾರಣೆ ಅಗತ್ಯವಾಗಿರುವ, ಕಾನೂನಿನಲ್ಲಿಯ ವಿವಿಧ ಲೋಪದೋಷಗಳನ್ನು ಸರಳ ಶಬ್ದಗಳಲ್ಲಿ ವಿವರಿಸಿದೆ.

ಈ ಕೃತಿಯು ಕಾನೂನು ಮತ್ತು ಕಾನೂನು ವ್ಯವಸ್ಥೆ ಇನ್ನೂ ವಿಕಸನಗೊಳ್ಳುತ್ತಲೇ ಇದೆ ಮತ್ತು ಸುದೀರ್ಘ ಕಾಲದಿಂದ ಉಳಿದುಕೊಂಡು ಬಂದಿರುವ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ನಿರ್ಣಾಯಕ ಚಿಂತನೆಯು ಅಗತ್ಯವಾಗಿದೆ ಎನ್ನುವುದನ್ನು ಶ್ರೀಸಾಮಾನ್ಯನಿಗೆ ವಿವರಿಸುವ ಪ್ರಯತ್ನವಾಗಿದೆ ಎಂದು ನ್ಯಾ.ರಮಣ ಹೇಳಿದರು. ವರ್ಚುವಲ್ ಕಾರ್ಯಕ್ರಮದಲ್ಲಿ ಮಾಜಿ ಸಿಜೆಐಗಳಾದ ಆರ್.ಸಿ.ಲೋಹಾಟಿ ಮತ್ತು ಎಂ.ಎನ್.ವೆಂಕಟಾಚಲಯ್ಯ ,ಮಾಜಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ಮತ್ತು ಹಿರಿಯ ನ್ಯಾಯವಾದಿ ಅರವಿಂದ ದಾತಾರ್ ಅವರೂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News