ಗೂಗಲ್, ಫೇಸ್ಬುಕ್ ಗೆ ಸಮನ್ಸ್ ನೀಡಿದ ಮಾಹಿತಿ ತಂತ್ರಜ್ಞಾನ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ
ಹೊಸದಿಲ್ಲಿ, ಜೂ.28: ಪ್ರಜೆಗಳ ಹಕ್ಕಿನ ರಕ್ಷಣೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್ ಸುದ್ಧಿ ಮಾಧ್ಯಮಗಳ ದುರ್ಬಳಕೆ ವಿಷಯದ ಕುರಿತು ಅಭಿಪ್ರಾಯ ತಿಳಿಸಲು ನಾಳೆ(ಮಂಗಳವಾರ) ಹಾಜರಿರುವಂತೆ ಸೂಚಿಸಿ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನ ಕುರಿತ ಸಂಸತ್ತಿನ ಸ್ಥಾಯೀ ಸಮಿತಿ ಗೂಗಲ್ ಮತ್ತು ಫೇಸ್ಬುಕ್ ಗೆ ಸಮನ್ಸ್ ನೀಡಿದೆ ಎಂದು ಮೂಲಗಳು ಹೇಳಿವೆ.
ಸಾಮಾಜಿಕ ಮಾಧ್ಯಮದ ದುರ್ಬಳಕೆ ಆರೋಪ ಹಾಗೂ ಸರಕಾರ-ಟ್ವಿಟರ್ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಸಮಿತಿ ಸಭೆ ನಡೆಯಲಿದೆ. ತರೂರ್ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆಯನ್ನು ಕೆಲಸಮಯ ಸ್ಥಗಿತಗೊಳಿಸಿದ ವಿವಾದವೂ ಚರ್ಚೆಗೆ ಬರುವ ಸಾಧ್ಯತೆಯಿದೆ. ಸಮಿತಿಂು ಅಧ್ಯಕ್ಷನ ನೆಲೆಯಲ್ಲಿ, ತನ್ನ ಹಾಗೂ ರವಿಶಂಕರ್ ಪ್ರಸಾದ್ ಟ್ವಿಟರ್ ಖಾತೆ ಸ್ಥಗಿತಗೊಳಿಸಿದ್ದನ್ನು ಪ್ರಶ್ನಿಸುವ, ಮತ್ತು ಭಾರತದಲ್ಲಿ ಅವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಸೂಚಿಸುವ ಅಧಿಕಾರ ತನಗಿದೆ ಎಂದು ತರೂರ್ ಹೇಳಿದ್ದಾರೆ.