×
Ad

ಅಸ್ಸಾಂ ಶಾಸಕ ಅಖಿಲ್‌ ಗೊಗೊಯ್‌ ವಿರುದ್ಧದ ಯುಎಪಿಎ, ದೇಶದ್ರೋಹ ಪ್ರಕರಣಗಳನ್ನು ಖುಲಾಸೆಗೊಳಿಸಿದ ಎನ್‌ಐಎ ನ್ಯಾಯಾಲಯ

Update: 2021-07-01 13:00 IST

ಗುವಾಹಟಿ: ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಬಾಕಿಯಿದ್ದ ಏಕೈಕ ಯುಎಪಿಎ  ಪ್ರಕರಣದಲ್ಲಿ ಅಖಿಲ್‌ ಗೊಗೊಯಿ ಅವರನ್ನು ಎನ್‌ಐಎ ಖುಲಾಸೆ ಮಾಡಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯವು ಅಸ್ಸಾಂ ಶಾಸಕ ಅಖಿಲ್‌ ಗೊಗೊಯ್‌ ರ ರ ವಿರುದ್ಧ ಬಾಕಿ ಉಳಿದಿದ್ದ ಯುಎಪಿಎ ಹಾಗೂ ದೇಶದ್ರೋಹ ಆರೋಪದಿಂದ ಮುಕ್ತಗೊಳಿಸಿದೆ. ಸದ್ಯ ಅಖಿಲ್‌ ರ ವಿರುದ್ಧದ ಎಲ್ಲ ಪ್ರಕರಣಗಳೂ ರದ್ದಾಗಿದ್ದು, ಶೀಘ್ರದಲ್ಲೇ ಅವರು ಜೈಲಿನಿಂದ ಹೊರ ಬರಲಿದ್ದಾರೆ ಎಂದು ಅವರ ವಕೀಲ ತಿಳಿಸಿದ್ದಾರೆ. 

ಅಸ್ಸಾಂನಲ್ಲಿನ ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಅಖಿಲ್‌ ಗೊಗೊಯ್‌ ರನ್ನು 2019 ರ ಡಿಸೆಂಬರ್‌ ನಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News