×
Ad

ಕೋವಿಡ್-19: ಅಮೆರಿಕದಿಂದ ಭಾರತಕ್ಕೆ ವೈದ್ಯಕೀಯ ಸಲಕರಣೆ ರವಾನೆ

Update: 2021-07-01 13:03 IST
ಸಾಂದರ್ಭಿಕ ಚಿತ್ರ, photo: facebook 

ನ್ಯೂಯಾರ್ಕ್: ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕದ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಶನ್ ಆಫ್ ದಿ ಟ್ರೈ ಸ್ಟೇಟ್ ಏರಿಯಾ ಆಫ್ ನ್ಯೂಯಾರ್ಕ್, ನ್ಯೂಜೆರ್ಸಿ ಹಾಗೂ ಕನೆಕ್ಟಿಕಟ್ ಎಂಬ ಸಂಸ್ಥೆ ವೆಂಟಿಲೇಟರ್ ಹಾಗೂ ಪಲ್ಸ್ ಆಕ್ಸಿಮೀಟರ್ ಸೇರಿದಂತೆ ವಿವಿಧ ವೈದ್ಯಕೀಯ ಪರಿಕರಗಳನ್ನು ರವಾನಿಸಿದೆ.

300 ವೆಂಟಿಲೇಟರ್ ಗಳು, ವೆಂಟಿಲೇಟರ್ ಸರ್ಕೀಟ್ ಗಳು, ಪೀಲ್ಟರ್ ಗಳು, ಫ್ಲೋ ಸೆನ್ಸರ್ಸ್ ಗಳು ಸೇರಿ 3,000 ವೈದ್ಯಕೀಯ ಸಾಧನಗಳು, 100 ಪೋರ್ಟಬಲ್ ವೆಂಟಿಲೇಟರ್ ಹಾಗೂ 3,10,176 ಪಲ್ಸ್ ಆಕ್ಸಿಮೀಟರ್ ಗಳನ್ನು ಮುಂಬೈ ಹಾಗೂ ದಿಲ್ಲಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಭಾರತಕ್ಕೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಕಳುಹಿಸಿರುವ ಎಫ್ ಐಎ ಕಾರ್ಯ ಶ್ಲಾಘನೀಯ ಎಂದು ನ್ಯೂಯಾರ್ಕ್ ನಲ್ಲಿರುವ ಭಾರತದ ಡೆಪ್ಯುಟಿ ಕಾನ್ಸುಲ್ ಜನರಲ್ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News