ಕೋವಿಡ್ ಲಸಿಕೆಯ ಬಳಕೆಯಾಗದ 1.24 ಕೋಟಿಗೂ ಅಧಿಕ ಡೋಸ್ ಗಳು ರಾಜ್ಯಗಳಲ್ಲಿ ಈಗಲೂ ಲಭ್ಯ: ಕೇಂದ್ರ

Update: 2021-07-01 17:10 GMT

ಹೊಸದಿಲ್ಲಿ, ಜೂ. 30: ಕೋವಿಡ್ ಲಸಿಕೆಯ 1.24 ಕೋಟಿಗೂ ಅಧಿಕ ಬಾಕಿ ಹಾಗೂ ಬಳಕೆಯಾಗದ ಡೋಸ್ ಗಳು ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಲೂ ಲಭ್ಯವಿವೆ. 94,66,420ಕ್ಕೂ ಅಧಿಕ ಡೋಸ್ ಗಳು ತಲಪುವ ನಿರೀಕ್ಷೆಯಲ್ಲಿದೆ. ಅದನ್ನು ಅವರು ಮುಂದಿನ ಮೂರು ದಿನಗಳಲ್ಲಿ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸಚಿವಾಲಯ ಗುರುವಾರ ಹೇಳಿದೆ.

ಭಾರತ ಸರಕಾರ ಉಚಿತವಾಗಿ ನೀಡುವ ಹಾಗೂ ಸರಕಾರಗಳು ನೇರ ಖರೀದಿ ವಿಭಾಗದ ಮೂಲಕ ಇದುವರೆಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯ 32.92 ಕೋಟಿಗೂ ಅಧಿಕ ಡೋಸ್ಗಳನ್ನು ಪೂರೈಸಲಾಗಿದೆ. ಇದರಲ್ಲಿ ವ್ಯರ್ಥ್ಯವಾದ ಡೋಸ್ ಸೇರಿದಂತೆ ಒಟ್ಟು 31,67,50,891 ಡೋಸ್ ಬಳಕೆಯಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್ ಲಸಿಕೆಯ 1.24 ಕೋಟಿ (1,24,50,909)ಗೂ ಅಧಿಕ ಬಾಕಿಯಾದ ಹಾಗೂ ಬಳಕೆಯಾಗದ ಡೋಸ್ ನೀಡಲು ಈಗಲೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಕಿ ಇವೆ ಎಂದು ಸಚಿವಾಲಯ ತಿಳಿಸಿದೆ.

ಇದಲ್ಲದೆ, ಲಸಿಕೆಯ 94,66,420 ಡೋಸ್ ಗಳು ತಲುಪುವ ನಿರೀಕ್ಷೆ ಇದೆ. ಇದನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮೂರು ದಿನಗಳಲ್ಲಿ ಸ್ವೀಕರಿಸಲಿವೆ ಎಂದು ಸಚಿವಾಲಯ ತಿಳಿಸಿದೆ.

ದೇಶಾದ್ಯಂತ ಕೋವಿಡ್ ಲಸಿಕೀಕರಣದ ವ್ಯಾಪ್ತಿ ವಿಸ್ತರಿಸಲು ಹಾಗೂ ವೇಗ ವರ್ಧಿಸಲು ಕೇಂದ್ರ ಸರಕಾರ ಬದ್ಧವಾಗಿದೆ. ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಹೊಸ ಹಂತ 2021 ಜೂನ್ 21ರಂದು ಆರಂಭವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News