×
Ad

ಮುಂಬೈ ನಕಲಿ ಲಸಿಕೀಕರಣ: ಪ್ರಧಾನ ಆರೋಪಿ ಬಂಧನ

Update: 2021-07-01 22:43 IST

ಹೊಸದಿಲ್ಲಿ, ಜೂ. 30: ನಗರ ಪೊಲೀಸ್ ಠಾಣೆಯಲ್ಲಿ ನಕಲಿ ಲಸಿಕೆ ಕುರಿತಂತೆ ಮತ್ತಷ್ಟು ದೂರುಗಳು ದಾಖಲಾದ ಬಳಿಕ ಮುಂಬೈ ಲಸಿಕೀಕರಣ ಹಗರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೊಂದು ಎಫ್ಐಆರ್ ದಾಖಲಿಸಿದ್ದಾರೆ ಹಾಗೂ ಇನ್ನೋರ್ವನನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಬಾರಾಮತಿಯಿಂದ ಬಂಧಿಸಿದ ವ್ಯಕ್ತಿಯನ್ನು ರಾಜೇಶ್ ಪಾಂಡೆ ಎಂದು ಗುರುತಿಸಲಾಗಿದೆ. ಈತ ಹಗರಣದ ಪ್ರಧಾನ ಆರೋಪಿ ಎಂದು ಅಂಬೋಲಿ ಪೊಲೀಸರು ತಿಳಿಸಿದ್ದಾರೆ. ಇದು ನಕಲಿ ಲಸಿಕೀಕರಣ ಹಗರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ದಾಖಲಿಸುತ್ತಿರುವ 10ನೇ ಎಫ್ಐಆರ್ ಹಾಗೂ ಬಂಧಿಸಿರುವ 12ನೇ ವ್ಯಕ್ತಿ.

ರಾಜೇಶ್ ಪಾಂಡೆ ತನ್ನ ಕಚೇರಿ ಆವರಣದಲ್ಲಿ ಲಸಿಕೀಕರಣ ನಡೆಸಿ 1,000 ಜನರಿಗೆ ಲಸಿಕೆ ನೀಡಿದ್ದಾನೆ ಎಂದು ಸೀಪ್ಝ್ ಇಂಡಸ್ಟ್ರೀಸ್ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಈತನ ಗುಂಪು ತನ್ನ 218 ಉದ್ಯೋಗಿಗಳಿಗೆ ಲಸಿಕೆ ನೀಡಿದೆ ಎಂದು ಕ್ವಾನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ದೂರಿನಲ್ಲಿ ಹೇಳಿದೆ.

ರಾಜೇಶ್ ಪಾಂಡೆ ಕೋಕಿಲಾಬೆನ್ ದೀರೂಭಾಯಿ ಅಂಬಾನಿ ಆಸ್ಪತ್ರೆಯ ಮಾಜಿ ಉದ್ಯೋಗಿ. ಈತ ಆಸ್ಪತ್ರೆಯ ವೈದ್ಯನಂತೆ ಸೋಗು ಹಾಕಿದ್ದ ಹಾಗೂ ನಕಲಿ ಲಸಿಕೀಕರಣ ಶಿಬಿರ ಆಯೋಜಿಸಿದ್ದ ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News