×
Ad

'ಅತ್ಯುತ್ತಮ‌ʼ ಕ್ಯಾಚ್‌ ಪಡೆದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಹರ್ಲೀನ್‌ ಡಿಯೋಲ್:‌ ಸಚಿನ್‌ ಪ್ರಶಂಸೆ

Update: 2021-07-10 20:39 IST

ನಾರ್ತ್‌ ಹ್ಯಾಂಪ್ಟನ್:‌ ಇಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡಗಳ ನಡುವಿನ ಟಿ-20 ಪಂದ್ಯಾಟದಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಹರ್ಲೀನ್‌ ಡಿಯೋಲ್‌ ಅದ್ಭುತ ಕ್ಯಾಚ್‌ ಪಡೆಯುವ ಮೂಲಕ ಮಿಂಚಿದ್ದಾರೆ. ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ಇದೊಂದು ದಾಖಲೆಯ ಕ್ಯಾಚ್‌ ಎಂದು ಹಲವರು ಬಣ್ಣಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ತಂಡದಲ್ಲಿ ಅಮಿ ಎಲೆನ್‌ ಜಾನ್ಸ್‌ 43 ರನ್‌ ಗಳಿಸಿ ಬ್ಯಾಟಿಂಗ್‌ ಮುಂದುವರಿಸುತ್ತಿದ್ದರು. ಈ ವೇಳೆ ಬೌಂಡರಿ ಲೈನ್‌ ಗೆ ಚೆಂಡನ್ನು ಅಟ್ಟಿದ ವೇಳೆ ತನ್ನ ಅಥ್ಲೆಟಿಕ್‌ ಚಾತುರ್ಯವನ್ನು ಪ್ರದರ್ಶಿಸಿದ ಹರ್ಲೀನ್‌ ಬೌಂಡರಿ ಗೆರೆಗಳ ಮಧ್ಯೆ ಚಮತ್ಕಾರವನ್ನೇ ಸೃಷ್ಟಿಸಿದರು. ಈ ವೀಡಿಯೊ ಸದ್ಯ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

"ಇದೊಂದು ಅತ್ಯುತ್ತಮ ಕ್ಯಾಚ್‌ ಆಗಿದೆ. ನನಗಂತೂ ಇದು ವರ್ಷದ ಕ್ಯಾಚ್"‌ ಎಂದು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅಭಿಪ್ರಾಯಿಸಿದ್ದರೆ, ಕ್ರಿಕೆಟ್‌ ಅಂಗಣದಲ್ಲಿ ಒಬ್ಬರು ನೋಡಬಯಸುವ ಅತ್ಯುತ್ತಮ ಕ್ಯಾಚ್‌ ಇದಾಗಿದೆ." ಎಂದು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News