ಟ್ವಿಟರ್ ನಲ್ಲಿ ಅಲ್ಪ ಕಾಲ ನೀಲಿ ಗುರುತು ಕಳೆದುಕೊಂಡ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಹೊಸದಿಲ್ಲಿ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್ ನಲ್ಲಿಸ್ವಲ್ಪ ಹೊತ್ತು ನೀಲಿ ಗುರುತು ಕಳೆದುಕೊಂಡಿದ್ದರು. ಬಳಿಕ ಅದನ್ನು ಮರಳಿ ಪಡೆದಿದ್ದಾರೆ. ರಾಜೀವ್ ಹೆಸರು ಬದಲಾವಣೆಯೇ ಇದಕ್ಕೆ ಕಾರಣ ಎಂದು ಟ್ವಿಟರ್ ದೂಷಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಟ್ವಿಟರ್‌ನಲ್ಲಿ ನೀಲಿ ಗುರುತನ್ನು ಸೋಮವಾರ ಬೆಳಿಗ್ಗೆ ಸ್ವಲ್ಪ ಹೊತ್ತು ಕಳೆದುಕೊಂಡ ನಂತರ ನೀಲಿ ಗುರುತನ್ನು ಪುನಃಸ್ಥಾಪಿಸಲಾಗಿದೆ. ಟ್ವಿಟರ್ ನಲ್ಲಿ ಅವರ ಹ್ಯಾಂಡಲ್ ನ ಹೆಸರು ಬದಲಾವಣೆ ಆಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಟ್ವಿಟರ್ ಮೂಲಗಳು ತಿಳಿಸಿವೆ.
ರಾಜೀವ್ ಚಂದ್ರಶೇಖರ್ ತಮ್ಮ ಹೆಸರನ್ನು ರಾಜೀವ್ ಎಂಪಿ ಬದಲಿಗೆ ರಾಜೀವ್-ಜಿಒಐ ಎಂದು ಬದಲಾಯಿಸಿದ್ದರು.
ಟ್ವಿಟರ್ ಪರಿಶೀಲನಾ ನೀತಿಯಲ್ಲಿ ವಿವರಿಸಿದಂತೆ, ಖಾತೆದಾರರು ತಮ್ಮ ಬಳಕೆದಾರ ಹೆಸರನ್ನು ಬದಲಾಯಿಸಿದರೆ, ಟ್ವಿಟರ್ ಸ್ವಯಂಚಾಲಿತವಾಗಿ ತಮ್ಮ ಖಾತೆಯಿಂದ ನೀಲಿ ಪರಿಶೀಲಿಸಿದ ಬ್ಯಾಡ್ಜ್ ಅನ್ನು ತೆಗೆದುಹಾಕಬಹುದು.
ಖಾತೆಯು ಆರು ತಿಂಗಳ ಅವಧಿಗೆ ನಿಷ್ಕ್ರಿಯವಾಗಿದ್ದರೆ ಪರಿಶೀಲನೆಯನ್ನು ಸಹ ಕಳೆದುಕೊಳ್ಳಬಹುದು.
ಕರ್ನಾಟಕದ ಮೂರು ಬಾರಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರು ಸಂಸತ್ತಿನ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.