ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ನಷ್ಟವಿಲ್ಲ: ಆರೆಸ್ಸೆಸ್ ಮುಖ್ಯಸ್ಥ ಭಾಗವತ್

Update: 2021-07-21 15:45 GMT

ಗುವಾಹಟಿ:  "ಸ್ವಾತಂತ್ರ್ಯದ ನಂತರ ದೇಶದ ಮೊದಲ ಪ್ರಧಾನಿ (ಜವಾಹರಲಾಲ್ ನೆಹರು) ಅಲ್ಪಸಂಖ್ಯಾತರನ್ನು ನೋಡಿಕೊಳ್ಳಲಾಗುವುದು ಎಂದು ಹೇಳಿದ್ದರು ಹಾಗೂ  ಇದುವರೆಗೆ ಇದನ್ನು ಮಾಡಲಾಗಿದೆ. ನಾವು ಅದನ್ನು ಮುಂದುವರಿಸುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯಿಂದ ಯಾವುದೇ ಮುಸ್ಲಿಮರು ಯಾವುದೇ ನಷ್ಟವನ್ನು ಎದುರಿಸುವುದಿಲ್ಲ" ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್  ಹೇಳಿದ್ದಾರೆ.

ಗುವಾಹಟಿಯಲ್ಲಿ "ಎನ್ಆರ್ ಸಿ ಹಾಗೂ ಸಿಎಎ-ಅಸ್ಸಾಂ ಹಾಗೂ  ಇತಿಹಾಸದ ರಾಜಕೀಯದ ಬಗ್ಗೆ ಪೌರತ್ವ ಚರ್ಚೆ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ಭಾಗವತ್ ಹೇಳಿದ್ದಾರೆ.

ಪೌರತ್ವ ಕಾನೂನು ನೆರೆಯ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತದೆ ಎಂದು ಭಾಗವತ್  ಒತ್ತಿಹೇಳಿದ್ದಾರೆ.

"ನಾವು ವಿಪತ್ತು ಸಮಯದಲ್ಲಿ ಈ ದೇಶಗಳಲ್ಲಿರುವ ಬಹುಸಂಖ್ಯಾತ ಸಮುದಾಯಗಳನ್ನು ತಲುಪುತ್ತೇವೆ ... ಆದ್ದರಿಂದ ಬೆದರಿಕೆಗಳು ಹಾಗೂ  ಭಯದಿಂದಾಗಿ ನಮ್ಮ ದೇಶಕ್ಕೆ ಬರಲು ಬಯಸುವ ಕೆಲವರು ಇದ್ದರೆ ನಾವು ಖಂಡಿತವಾಗಿಯೂ ಅವರಿಗೆ ಸಹಾಯ ಮಾಡ ಬೇಕಾಗುತ್ತದೆ" ಎಂದು ಭಾಗವತ್ ಹೇಳಿದರು.

ಎನ್‌ಆರ್‌ಸಿ ಬಗ್ಗೆ ಮಾತನಾಡಿದ ಭಾಗವತ್, ತನ್ನ ನಾಗರಿಕರು ಯಾರೆಂದು ತಿಳಿಯುವ ಹಕ್ಕು ಎಲ್ಲ ರಾಷ್ಟ್ರಗಳಿಗೂ ಇದೆ ಎಂದರು.

"ಸರಕಾರವು ಇದರಲ್ಲಿ ತೊಡಗಿಸಿಕೊಂಡಿದ್ದರಿಂದ ಈ ವಿಷಯವು ರಾಜಕೀಯ ಕ್ಷೇತ್ರದಲ್ಲಿದೆ ... ಈ ಎರಡು ವಿಷಯಗಳ ಸುತ್ತ ಒಂದು ಕೋಮು ನಿರೂಪಣೆಯನ್ನು ಸೃಜನಾತ್ಮಕವಾಗಿ ರಚಿಸುವ ಮೂಲಕ ಒಂದು ಭಾಗದ ಜನರು ರಾಜಕೀಯ ಲಾಭ ಪಡೆಯಲು ಬಯಸುತ್ತಾರೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News