ಒಲಿಂಪಿಕ್ಸ್ ಆರ್ಚರಿ: ಭಾರತದ ದೀಪಿಕಾ ಕುಮಾರಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶ

Update: 2021-07-28 10:00 GMT

ಟೋಕಿಯೊ: ಭಾರತದ ಖ್ಯಾತ ಆರ್ಚರಿ ಪಟು ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ಆರ್ಚರಿ ಸ್ಪರ್ಧೆಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಬುಧವಾರ ನಡೆದ  2ನೇ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ ಅವರು ಅಮೆರಿಕದ ಜೆನ್ನಿಫರ್ ಮುಸಿನೊ-ಫೆರ್ನಾಂಡೆಝ್ ಅವರನ್ನು 6-4(25-26, 28-25, 27-25, 24-25,26-25) ಅಂತರದಿಂದ ಮಣಿಸಿದರು.

ಇದಕ್ಕೂ ಮೊದಲು ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ ಅವರು ಭೂತಾನ್ ನ ಕರ್ಮಾ ಅವರನ್ನು 6-0 ನೇರ ಸೆಟ್ ಗಳ ಅಂತರದಿಂದ ಮಣಿಸಿದರು.

ಪ್ರವೀಣ್ ಜಾಧವ್ ಅವರು ಅಮೆರಿಕದ ಬ್ರಾಡಿ ಎಲ್ಲಿಸನ್ ವಿರುದ್ಧ ಅಂತಿಮ-16ರ ಸುತ್ತಿನ ಸ್ಪರ್ಧೆಯನ್ನು ಸೋತಿದ್ದಾರೆ. ಈ ಮೂಲಕ ಪುರುಷರ ವೈಯಕ್ತಿಕ ಆರ್ಚರಿ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ಇನ್ನೋರ್ವ ಆರ್ಚರಿ ಪಟು ತರುಣ್ ದೀಪ್ ರಾಯ್ ಅವರು ಪುರುಷರ ವೈಯಕ್ತಿಕ 16ರ ಸುತ್ತಿನ ಸ್ಪರ್ಧೆಯಲ್ಲಿ ಸೋಲನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News